ಕಾರ್ಕಳ, ಆ. 30: ಕಾರ್ಕಳ ಬಿಜೆಪಿ ಯುವಮೋರ್ಚಾ ವತಿಯಿಂದ ಗೋಗ್ರಾಸ ಸಂಕಲ್ಪದ ಬೃಹತ್ ಅಭಿಯಾನದಂಗವಾಗಿ ನೀಲಾವರ ಗೋಶಾಲೆಗೆ ಹಸಿಹುಲ್ಲು ಸಮರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಕಾರ್ಕಳ ಯುವಮೋರ್ಚಾ ಅಧ್ಯಕ್ಷ ಮುಟ್ಲುಪಾಡಿ ಸುಹಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಭರತ್ ಕುಮಾರ್ ಜೈನ್ ಮತ್ತು ಯೋಗೀಶ್ ಸಾಲಿಯಾನ್ ,ಮತ್ತು ಯುವಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು.


































