ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ- ಮಾವನಲ್ಲಿ ಟೈಲರ್‌ ಎಂದು ಸುಳ್ಳು ಹೇಳಿದ್ದ ನೌಶಾದ್‌

         ಸಂಗೀತಕಾರ ನೌಶಾದ್ ರ ಭಾವೀ ಮಾವನಿಗೆ ಸಂಗೀತವೆಂದರೆ ಇಷ್ಟವಿರಲಿಲ್ಲ. ಅವರು ದಿಲ್ಲಿಯಲ್ಲಿ ಟೈಲರ್ ಆಗಿದ್ದರು. ಆದ್ದರಿಂದ ನೌಶಾದ್ ಕೂಡಾ ಮುಂಬಯಿಯಲ್ಲಿ ಟೈಲರ್ ಎಂಬುದಾಗಿ ಸುಳ್ಳು ಹೇಳಲಾಗಿತ್ತು. ಮದುವೆಯ ದಿನ ಬ್ಯಾಂಡ್ ವಾಲಾರು ನೌಶಾದ್ ರ ಗೀತೆಗಳನ್ನೇ ನುಡಿಸುತ್ತಿದ್ದರು. ಇದನ್ನು ಕೇಳಿದ ಮಾವ ” ಕ್ಯಾ ಝಮಾನಾ ಆಗಯಾ ….ಕೈಸೆ ಕೈಸೇ ಗಾನಾ ಬಜಾತೇ ಹೈ…” ಎಂಬುದಾಗಿ ಗೊಣಗತೊಡಗಿದರು.ನೌಶಾದ್ ರಿಗೆ ಒಳಗೊಳಗೇ ಮುಜುಗರವಾಗುತ್ತಿತ್ತು.

     ಕೆಲ ಸಮಯದ ಬಳಿಕ ಮಾವನಿಗೆ ಅಳಿಯ ನೌಶಾದ್ ಸಂಗೀತಕಾರನೆಂಬ ಸತ್ಯ ತಿಳಿಯಿತು.ನೌಶಾದ್ ರ ಯಶಸ್ಸಿನ ಅರಿವಾದ ಬಳಿಕ ಹೆಮ್ಮೆಯಿಂದ ” ಮೇರಾ ಬೇಟಾ ನೌಶಾದ್ ಹೈ….” ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು.

ಏಳಿಂಜೆ ನಾಗೇಶ್  98929 80750







































































error: Content is protected !!
Scroll to Top