ಸಸ್ಯ ಸಂಪತ್ತು – ವೀಳ್ಯದ ಎಲೆಯಿಂದಲೂ ಮಾಡಬಹುದು ಬಗೆಬಗೆ ತಿನಿಸು

ವೀಳ್ಯದೆಲೆ ಮನೆಯ ಹಿತ್ತಲಲ್ಲಿ ಸುಲಭವಾಗಿ ಬೆಳೆಯುವಂಥ ಸಸಿ. ವೀಳ್ಯದೆಲೆಯನ್ನು ಬೆಳೆಸುವುದು ಅಷ್ಟೇನೂ ಕಷ್ಟವೇನಲ್ಲ, ವೀಳ್ಯದ ಬಳ್ಳಿ ಹಬ್ಬಲು ಆಸರೆ ನೀಡಿದರೆ ಸಾಕು. ಮೇಲು ಮೇಲಕ್ಕೆ ಹಬ್ಬುತ್ತದೆ. ಹಲವರಿಗೆ ಇದನ್ನು ಬೆಳೆಸುವುದೇ ಒಂದು ಕಸುಬು ಮತ್ತು ಜೀವನಾಧಾರ.

ನಮ್ಮ ಸಂಸ್ಕೃತಿಯಲ್ಲಿ ಹಾಗೆಯೇ ಭಾರತೀಯ ಪರಂಪರೆಯಲ್ಲಿ  ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು ಇದನ್ನು ತುಂಬ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು  ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಬಳಕೆ ಮಾಡುತ್ತಾರೆ.

ಊಟದ ನಂತರ ವೀಳ್ಯದೆಲೆ ತಿನ್ನುವುದು ವಾಡಿಕೆ. ಆಹಾರವು ಸುಲಭವಾಗಿ ಜೀರ್ಣವಾಗಲಿ ಎಂಬ ಉದ್ದೇಶದಿಂದ ಈ ಸಂಪ್ರದಾಯವನ್ನು ಮಾಡಿದ್ದಾರೆ. ಹಾಗೆ ಮಕ್ಕಳಿಗೆ ಔಷಧಿ ರೂಪದಲ್ಲಿ ಇದನ್ನು ಕೊಡುತ್ತಾರೆ.

ಅಡಿಗೆಯಲ್ಲಿ  ವೀಳ್ಯದೆಲೆಯನ್ನು ಬೆಳೆಸುವುದು ಹೇಗೆ?

ವೀಳ್ಯದೆಲೆಯ ಪಾನಕ

ಇದಕ್ಕೆ ಬೇಕಾದ ಸಾಮಾಗ್ರಿಗಳು:

5 ವೀಳ್ಯದೆಲೆ, 1 ಚಮಚ ಜೀರಿಗೆ, ಎರಡು ಲೋಟ ನೀರು, ಚಿಟಿಕೆ ಉಪ್ಪು

ವಿಧಾನ

ಎರಡು ಲೋಟ ನೀರನ್ನು, 1 ಚಮಚ ಜೀರಿಗೆ, 5 ವೀಳ್ಯದೆಲೆ ಹಾಕಿ ಚೆನ್ನಾಗಿ ಕುದಿಯಲು ಬಿಡಿ.  ಕುದಿಯುವ ನೀರು ಒಂದು ಲೋಟ ಹದಕ್ಕೆ ಬರುವಾಗ ಅದಕ್ಕೆ ಚಿಟಿಕೆ ಉಪ್ಪನ್ನು ಹಾಕಿ ಗಾಳಿಸಿ ಉಗುರು ಬೆಚ್ಚಗೆ ಬಂದ ಮೇಲೆ ಕುಡಿಯಿರಿ.

ಉಪಯೋಗ

ಜೀರ್ಣಶಕ್ತಿಗೆ ಉತ್ತಮವಾದಂತಹ ಪಾನಕ

ವೀಳ್ಯದೆಲೆಯ ಚಾಟ್

ಇದಕ್ಕೆ ಬೇಕಾದ ಸಾಮಾಗ್ರಿಗಳು

10 ವೀಳ್ಯದ ಎಲೆ, 1 ಕಪ್ ಕಡಲೆ ಹಿಟ್ಟು, ಚಿಟಿಕೆ ಓಮದ ಕಾಳು, ರುಚಿಗೆ ಉಪ್ಪು, ಕರಿಯಲು ಎಣ್ಣೆ.

ವಿಧಾನ

ಕಡಲೆಹಿಟ್ಟಿಗೆ ,ಚಿಟಿಕೆ ಓಮದ ಕಾಳು, ರುಚಿಗೆ ಉಪ್ಪನ್ನು ಹಾಕಿ ಪೋಡಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ, ಕಾದ ಎಣ್ಣೆಗೆ ವೀಳ್ಯದೆಲೆಯನ್ನು ಕಡಲೆ ಹಿಟ್ಟಿನಲ್ಲಿ ಮುಳುಗಿಸಿ ಪೋಡಿಯ ರೀತಿಯಲ್ಲಿ ಹುರಿಯಿರಿ.

ಬಿಸಿಬಿಸಿ ಇರುವಾಗಲೇ ಹುರಿದ ವೀಳ್ಯದ ಎಲೆಯ ಪೋಡಿಗೆ ಗ್ರೀನ್ ಚಿಲ್ಲಿ ಚಟ್ನಿ, ಸ್ವೀಟ್ ಚಟ್ನಿ ಒಂದೊಂದು ಚಮಚದ ಅಳತೆಗೆ ಹಾಕಿ. ಎರಡು ಚಮಚ ಮೊಸರು ಹಾಗೂ ಕಡಲೆಹಿಟ್ಟಿನ ಬೂಂದಿ ಹಾಕಿದರೆ ತಿನ್ನಲು ಸುಪರ್‌ ಆಗಿರುತ್ತದೆ.

ಉಪಯೋಗ

ವೀಳ್ಯದೆಲೆ ಆರೋಗ್ಯಕ್ಕೆ ಹಿತಕರ ಹಾಗೂ ಈ ರೀತಿಯ ತಿಂಡಿಗಳನ್ನು ಮಕ್ಕಳಿಗೆ ಮಾಡಿಕೊಡುವುದರಿಂದ ಹೊರಗಿನ ತಿಂಡಿಗಳನ್ನು

ತಿನ್ನುವುದನ್ನು ತಡೆಯಬಹುದು.

ರಮಿತಾ ಶೈಲೇಂದ್ರ ರಾವ್







































































error: Content is protected !!
Scroll to Top