ಲಂಡನ್, ಆ, 23 : ಮಹಾತ್ಮ ಗಾಂಧೀಜಿಯವರು ವ್ಯಕ್ತಿಯೊಬ್ಬರಿಗೆ ನೀಡಿದ್ದ ಒಂದು ಕನ್ನಡಕ ಬ್ರಿಟನ್‌ನ ಹರಾಜಿನಲ್ಲಿ 2.54 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಈಸ್ಟ್ ಬ್ರಿಸ್ಟಲ್ ಹರಾಜು ಕಂಪನಿ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಚಿಕ್ಕಪ್ಪನಿಗೆ ಗಾಂಧಿಯವರು ನೀಡಿದ ಆ ಕನ್ನಡಕವನ್ನು ವ್ಯಕ್ತಿಯೊಬ್ಬರು ನೀಡಿದ್ದರು. ಅಪೂರ್ವವಾದ ವಸ್ತುವಿಗೆ ಹರಾಜಿನಲ್ಲಿ ಅತ್ಯುತ್ತಮ ಫಲಿತಾಂಶ ಸಿಕ್ಕಿದೆ. ಹರಾಜಿನಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು ಎಂದಿದೆ.
ಮಹಾತ್ಮ ಗಾಂಧೀಜಿಯವರು 1920-30ರ ಅವಧಿಯಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ಈ ಕನ್ನಡಕವನ್ನು ನೀಡಿದ್ದರು ಎಂದು ಹೇಳಲಾಗಿದೆ.

ತಮ್ಮ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬೇರೆಯವರಿಗೆ ಅಥವಾ ಅಗತ್ಯ ಇರುವವರೆಗೆ ನೀಡುವ ಪರಿಪಾಠವನ್ನು ಗಾಂಧೀಜಿಯವರು ಹೊಂದಿದ್ದರು.






































































