
ದಿಲ್ಲಿ, ಆ. 18: ಮುಂಬರುವ ಸೆ.1ರಿಂದ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರಕಾರ ಯೋಜನೆ ರೂಪಿಸುತ್ತಿದೆ.
ಕರ್ನಾಟಕವೂ ಸೇರಿ ಕೆಲವು ರಾಜ್ಯಗಳು ಕೊರೊನಾ ವೈರಸ್ ಹಾವಳಿ ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಶಾಲೆಗಳನ್ನು ತೆರೆಯುವುದಕ್ಕೆ ವಿರೋಧ ಹೊಂದಿದ್ದರೂ ಕೆಂದ್ರ ಸರಕಾರ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಶಾಲಾ ಕಾಲೇಜುಗಳನ್ನು ಆರಂಭಿಸುವ ಸಿದ್ಧತೆಯಲ್ಲಿದೆ. ಸದ್ಯಕ್ಕೆ ಕೇಂದ್ರ ಸಿದ್ಧಪಡಿಸಿರುವ ಮಾರ್ಗಸೂಚಿ ಹೀಗಿದೆ:
-ಸೆಪ್ಟೆಂಬರ್ 01 ರಿಂದ 10 ನೇ ತರಗತಿಯಿಂದ 11 ಮತ್ತು 12 ನೇ ತರಗತಿ ಆರಂಭ
-ಸೆಪ್ಟೆಂಬರ್ 15 ರಿಂದ 6 ರಿಂದ 9 ನೇ ತರಗತಿಯವರೆಗೆ ಆರಂಭ
-ನವೆಂಬರ್ 14 ರಿಂದ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ