ಪ್ರಾಣಾಪಾಯದಲ್ಲಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶಾಸಕ – ವೈರಲ್‌ ಅಯಿತು ಥಿಯಾಮ್ಸಂಗಾ ಕಾರ್ಯ

ದಿಲ್ಲಿ, ಆ. 12:   ಮಿಜೋರಾಂನ ಶಾಸಕ ಝಡ್. ಆರ್. ಥಿಯಾಮ್ಸಂಗಾ ಅವರು ಪ್ರಾಣಾಪಾಯದಲ್ಲಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಅವರು ಸಿಸೇರಿಯನ್ ನಡೆಸಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ಮೂಲಕ  ಮಹಿಳೆ ಮತ್ತು ಆಕೆಯ ಗಂಡು ಮಗುವನ್ನು ಬದುಕಿಸಿದ್ದಾರೆ.

62 ವರ್ಷದ   ಥಿಯಾಮ್ಸಂಗಾ ಅವರು ಸ್ತ್ರೀ ರೋಗ ತಜ್ಞರೂ ಹೌದು.  ಸುಮಾರು 30 ವರ್ಷ ವೈದ್ಯನಾಗಿ ದುಡಿದಿದ್ದಾರೆ.  ಈ ಹಿಂದೆಯೂ ಅವರು ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿ ಅನೇಕರ ಜೀವ ಉಳಿಸಿದ್ದಾರೆ.

ಮಿಜೋ ನ್ಯಾಷನಲ್ ಫ್ರಂಟ್  ಶಾಸಕರಾಗಿರುವ ಅವರು ಮಂಗಳವಾರ,  39 ವರ್ಷದ ಮಹಿಳೆ ಮತ್ತು ಅವರ ನವಜಾತ ಶಿಶುವನ್ನು ಉಳಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದ್ದಾರೆ.

ಸೋಮವಾರ ಮ್ಯಾನ್ಮಾರ್‌ನ ಚಂಪೈ ಜಿಲ್ಲೆಯ ಕೊರೊನಾ ವೈರಸ್ ಪೀಡಿತ ಮತ್ತು ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗರ್ಭಿಣಿ ಮಹಿಳೆಗೆ ತೀವ್ರವಾಗಿ ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿರುವ ವಿಷಯ ತಿಳಿಯಿತು.  ಅಲ್ಲಿದ್ದ ಏಕೈಕ ಸರಕಾರಿ ಆಸ್ಪತ್ರೆಯ ವೈದ್ಯರು ರಜೆಯಲ್ಲಿ ಹೋಗಿದ್ದರು. ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಶಾಸಕರು ಅಲ್ಲಿಗೆ ಧಾವಿಸಿ ಮಹಿಳೆಗೆ ಸಿಝೇರಿಯನ್‌ ನಡೆಸಿದ್ದಾರೆ.

ಥಿಯಾಮ್ಸಂಗಾ 1985 ರಲ್ಲಿ ಎಂಬಿಬಿಎಸ್ ಪದವಿ ಪಡೆದರು ಮತ್ತು 1995 ರಲ್ಲಿ ಮಣಿಪುರದ ಇಂಫಾಲದಲ್ಲಿರುವ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪಡೆದರು. ಅವರು ಮೇ 2018 ರಲ್ಲಿ ಐಜಾಲ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ  ನಿವೃತ್ತರಾಗಿದ್ದಾರೆ.

 







































































error: Content is protected !!
Scroll to Top