Wednesday, July 6, 2022
spot_img
Homeವಾರ ಭವಿಷ್ಯನಿತ್ಯ ಭವಿಷ್ಯ 11-08-2020

ನಿತ್ಯ ಭವಿಷ್ಯ 11-08-2020

ಮೇಷ
ಧನಾಗಮನಕ್ಕೆ ಕೊರತೆ ಇರಲಾರದು. ಹಿರಿಯರ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ಕಾರ್ಯಗಳಲ್ಲಿ ಕೆಲವೊಂದು ವಿಘ್ನಗಳು ಕಂಡುಬಂದರೂ ಯಶಸ್ಸು ಕಾಣುವಿರಿ.

ವೃಷಭ
ಅಷ್ಟಮದಲ್ಲಿ ಗುರು ಕೇತು ಇರುವುದರಿಂದ ಅತೀ ಅಗತ್ಯ ಕೆಲಸಗಳಿಗೆ ವಿಳಂಬವಾದೀತು. ಮನೆಯಲ್ಲಿ ಸುಖ, ಶಾರೀರಿಕ ನೆಮ್ಮದಿಯ ಕೊರತೆ ಕಂಡುಬರಲಿದೆ. ರವಿ ಬುಧ ಸುಖ ಸ್ಥಾನದಲ್ಲಿರುವುದರಿಂದ ಅನೇಕ ಮೂಲಗಳಿಂದ ಧನಾಗಮನವಿರಲಿದೆ.

ಮಿಥುನ
ಶನಿ ಅಷ್ಟಮದಲ್ಲಿರುವುದರಿಂದ ಆಪ್ತವರ್ಗದಲ್ಲಿ ಮನಸ್ತಾಪ ಬರಲಿದೆ. ಅನಾವಶ್ಯಕವಾಗಿ ಖರ್ಚು ವೆಚ್ಚಗಳೇ ಅಧಿಕವಾಗಲಿದೆ. ಸಪ್ತಮದಲ್ಲಿ ಗುರು ಕೇತು ಇರುವುದರಿಂದ ಸಂಸಾರದಲ್ಲಿ ತಾಳ್ಮೆ ಸಮಧಾನವೇ ಪ್ರಧಾನವಾಗಿರುತ್ತದೆ.

ಕರ್ಕಾಟಕ
ದ್ವಿತೀಯದಲ್ಲಿ ರವಿ ಬುಧ ಇರುವುದರಿಂದ ವಿದ್ಯಾರ್ಥಿಗಳು ಯಶಸ್ವಿಯಾಗುವರು. ಮಂಗಲ ಕಾರ್ಯಕ್ಕೆ ಅಡೆತಡೆಗಳು ಬರಲಿವೆ. ಶನಿ ಸಾಂಸಾರಿಕ ಸುಖವನ್ನು ಹಾಳು ಮಾಡಲಿದ್ದಾನೆ. ಪ್ರೀತಿ-ಪ್ರೇಮದಿಂದ ಅವಮಾನ ನಿಂದನೆಗಳಿಗೆ ಗುರಿಯಾಗುವ ಸಾಧ್ಯತೆಯಿದೆ.

ಸಿಂಹ
ರವಿ, ಬುಧ ಜನ್ಮದಲ್ಲಿರುವುದರಿಂದ ಬರುವ ಆದಾಯಕ್ಕೆ ಕೊರತೆಯಿಲ್ಲ. ಸದಾ ಉದ್ವೇಗಕ್ಕೆ ಒಳಗಾಗುವ ಪರಿಸ್ಥಿತಿ ನಿಮ್ಮದು. ಉದ್ಯೋಗ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ.

ಕನ್ಯಾ
ಕುಜ ಅಷ್ಟಮದಲ್ಲಿ ಬಂದಿರುವುದರಿಂದ ನಿಮ್ಮ ಸಂಸಾರದಲ್ಲಿ ವಿರಸ ಬರುವ ಸಾಧ್ಯತೆಯಿದೆ. ಭೂಮಿ ಸಂಬಂಧ ಸಹೋದರ ವರ್ಗದಲ್ಲಿ ಕಲಹ ಬರಲಿದೆ. ಮಕ್ಕಳ ವಿಷಯವಾಗಿ ಬೇಸರ ಬರಲಿದೆ.

ತುಲಾ
ಸಪ್ತಮದಲ್ಲಿ ಕುಜನಿರುವುದರಿಂದ ಸಂಸಾರದಲ್ಲಿ ತಾಳ್ಮೆ ಸಹನೆಯೇ ಪ್ರಧಾನ ಪಾತ್ರವಹಿಸಲಿದೆ. ಸುಖಸ್ಥಾನದ ಶನಿ ವೈದ್ಯರ ದರ್ಶನ ಮಾಡಿಸುವ ಸಾಧ್ಯತೆಯಿದೆ. ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ.

ವೃಶ್ಚಿಕ
ಗುರು, ಕೇತು, ಕುಜ ಎಲ್ಲರೂ ಆದಾಯವನ್ನು ಹೆಚ್ಚಿಸುವವರಾದರೂ ಅಷ್ಟಮದಲ್ಲಿ ಶುಕ್ರ-ರಾಹು ಬಂದಾಗ ಅನೇಕ ಮಾನಸಿಕ, ಶಾರೀರಿಕ ಸಮಸ್ಯೆ ತಲೆದೋರುವುದು. ಕುಲದೇವರ ದರ್ಶನ ಮಾಡಿ. ನಡೆನುಡಿಯ ಬಗ್ಗೆ ಎಚ್ಚರವಿರಲಿ

ಧನು
ವಿದೇಶ ಪ್ರಯಾಣ ಯೋಗವಿದೆ. ಉದ್ಯೋಗ ಪ್ರಾಪ್ತಿ ಯೋಗವಿದೆ. ಸಾಡೇಸಾತ್ ಶನಿಯ ಕಾಟದಿಂದಾಗಿ ದೈಹಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಆಗಾಗ ವ್ಯಾಕುಲತೆ, ಉದ್ವೇಗ ಅಸಮಾಧಾನ ಹೊಂದಲಿದ್ದೀರಿ. ಯಾರಿಗೂ ವಂಚನೆ ಮಾಡಬೇಡಿ.

ಮಕರ
ಅಷ್ಟಮದಲ್ಲಿ ರವಿ,ಬುಧ ಜನ್ಮದಲ್ಲಿ ಶನಿ ಇರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಬಹಳ ಎಚ್ಚರವಹಿಸಬೇಕು. ದುಶ್ಚಟಗಳಿಂದ ದೂರವಿರಿ. ಹಿರಿಯರ ಆರೋಗ್ಯದ ಬಗ್ಗೆ ತುಂಬಾ ಎಚ್ಚರವಿರಲಿ.

ಕುಂಭ
ಶುಭ -ಅಶುಭ ಫಲಗಳ ಮಿಶ್ರಣ ಕಾಲವಿದು. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಬೇಕು. ಬರುತ್ತಿರುವ ಆದಾಯಕ್ಕೆ ತೊಂದರೆ ಇರುವುದಿಲ್ಲ.

ಮೀನ
ಕುಜ ದ್ವಿತೀಯಾದಲ್ಲಿದ್ದುಕೊಂಡು ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಲಿವೆ. ನಿಮ್ಮವರಿಂದಲೇ ವಿಶ್ವಾಸಘಾತಕ ಕೆಲಸಗಳು ನಡೆದು ವೈರಾಗ್ಯ ಭಾವನೆ ಹೊಂದುವ ಸಾಧ್ಯತೆಯೂ ಇದೆ. ತಾಳ್ಮೆ, ಸಂಯಮವಿರಲಿ.

ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
97414 89529

 ---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!