ಇಡುಕ್ಕಿ,, ಆ. 9: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ಪೆಟ್ಟಿಮುಡಿಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೇರಿದೆ. ಇಂದು 16 ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಮಣ್ಣನ ರಾಶಿಯಡಿಯಿಂದ ಹೊರತೆಗೆದಿದ್ದಾರೆ.
ಹಲವು ಮಂದಿ ಮಣ್ಣಿನಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮೂರು ದಿನ ಮುಂದುವರಿಯಲಿದೆ. ಶುಕ್ರವಾರ ನಸುಕಿನ ಹೊತ್ತು ಬೃಹತ್ ಬೆಟ್ಟ ಕುಸಿದು ಅದರ ಬುಡದಲ್ಲಿದ್ದ ಮನೆಗಳೆಲ್ಲ ಮಣ್ಣಿನ ರಾಶಿಯಡಿ ಸಮಾಧಿಯಾಗಿವೆ.ಮುನ್ನಾರ್ ನ ಚಹಾ ತೋಟಗಳಲ್ಲಿ ದುಡಿಯುವ ತಮಿಳು ಕಾರ್ಮಿಕರು ಈ ಮನೆಗಳಲ್ಲಿ ವಾಸವಾಗಿದ್ದರು.