ದಿಲ್ಲಿ : ಬಹು ಕಾಲದಿಂದ ನಿರೀಕ್ಷಿಸುತ್ತಿದ್ದ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಕ್ಷಣ ಸನ್ನಿಹಿತವಾಗಿದೆ. ಪೈಕಿ ಮೊದಲ ಬ್ಯಾಚ್ ಬುಧವಾರ ಭಾರತಕ್ಕೆ ಬಂದಿಳಿಯಲಿವೆ. ಈಗಾಗಲೇ ಫ್ರಾನ್ಸ್ ನಿಂದ ಹೊರಟಿರುವ ಜೆಟ್ ವಿಮಾನಗಳು ದುಬೈಯಲ್ಲಿ ಇಳಿದಿದ್ದು, ಅಲ್ಲಿ ಇಂಧನ ತುಂಬಿ ಮತ್ತೆ ಹಾರಾಟ ಮುಂದುವರಿಸಲಿದೆ. ಬುಧವಾರ ಹರ್ಯಾಣದ ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ.
ಇದೀಗ ಮೊದಲ ಹಂತದಲ್ಲಿ ಕೇವಲ ಐದು ವಿಮಾನಗಳು ಮಾತ್ರ ಭಾರತಕ್ಕೆ ಬಂದಿಳಿಯಲಿವೆ. ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಫ್ರಾನ್ಸ್ ನಿರ್ಮಾಣ ಕಂಪನಿಗೆ ತ್ವರಿತವಾಗಿ ರಫೇಲ್ ವಿಮಾನಗಳನ್ನು ಒದಗಿಸುವಂತೆ ಮನವಿ ಮಾಡಿತ್ತು. ಅದರಂತೆ ಇದೀಗ ಮೊದಲ ಹಂತದಲ್ಲಿ ಐದು ವಿಮಾನಗಳನ್ನು ಫ್ರಾನ್ಸ್ ನೀಡಿದೆ.