ನಾಲ್ಕೇ ತಾಸಿನಲ್ಲಿ ಹೋಯಿತು ಲಾಲಾಜಿ ಮೆಂಡನ್‌ ನಿಗಮ ಅಧ್ಯಕ್ಷ ಹುದ್ದೆ

ಬೆಂಗಳೂರು, ಜು. 27 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್‌ ಬರೀ ನಾಲ್ಕು ತಾಸಿನಲ್ಲಿ ಹಿಂದುಳಿದ ವರ್ಗಗಳ  ಆಯೋಗದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಮೆಂಡನ್‌ ಜೊತೆಗೆ ಇನ್ನೂ ಮೂವರು  ಶಾಸಕರು ನಾಲ್ಕು  ತಾಸಿನಲ್ಲಿ ಹುದ್ದೆಗಳನ್ನು ಕಳೆದುಕೊಂಡಿದ್ದಾರೆ.  ಜಿ.ಎಚ್‌ ತಿಪ್ಪಾರೆಡ್ಡಿ, ಪರಪ್ಪ ಮುನವಳ್ಳಿ, ಬಸವರಾಜ ಅವರ ನಿಗಮಗಳ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲಾಗಿದೆ.

ಸೋಮವಾರ ಮಧ್ಯಾಹ್ನ 2 ಗಂಟೆಗೆ 24 ಶಾಸಕರನ್ನು  ವಿವಿಧ ನಿಗಮ ಮಂಡಳಿಗಳಿಗೆ ನೇಮಿಸಿ ಆದೇಶ  ಹೊರಡಿಸಿದ್ದರು. ಆದರೆ ಸಂಜೆ 6 ಗಂಟೆಗೆ ಈ ಪೈಕಿ ನಾಲ್ವರು  ಶಾಸಕರ ನೇಮಕಾತಿಯನ್ನು ಹಿಂದೆಗೆದುಕೊಂಡ ಆದೇಶ ಹೊರಬಿದ್ದಿತು. ಬಿಜೆಪಿ ಈ ನೇಮಕಾತಿಯನ್ನು  ಸರಕಾರದ ವಾರ್ಷಿಕೋತ್ಸವದ ಕೊಡುಗೆ ಎಂದು ಹೇಳಿಕೊಂಡಿತ್ತು. ಆದರೆ  ಈ ನಾಲ್ವರು  ಶಾಸಕರಿಗೆ ವಾರ್ಷಿಕೋತ್ಸವ ಕಹಿ ಆಯಿತೆ? ನಿಗಮ , ಮಂತಳಿಗಳ ಹುದ್ದೆ ಇಷ್ಟ ಇಲ್ಲ ಎಂದು ಈ ಶಾಸಕರು ಹೇಳಿದ ಕಾರಣ ಅವರ ಹುದ್ದೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸರಕಾರದ ಹಿಂದಿನ ಅವಧಿಯಲ್ಲಿ ಹಾಲಾಡಿ  ಶಾಸಕ ಶ್ರೀನಿವಾಸ ಶೆಟ್ಟಿಯವರಿಗೂ  ಇದೇ ರೀತಿ ಸಚಿವ ಪದವಿ ಕೈತಪ್ಪಿ ಹೋದ ಘಟನೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.

error: Content is protected !!
Scroll to Top