ಕಿರುತೆರೆಯಲ್ಲಿ ವೀರಪ್ಪನ್‌ ಅಟ್ಟಹಾಸ

ಈಗಾಗಲೇ ವೀರಪ್ಪನ್​ ಕುರಿತು ಸಾಕಷ್ಟು ಸಿನಿಮಾಗಳು ಬಂದೋಗಿದೆ. ಕಿಶೋರ್​ ವೀರಪ್ಪನ್​ ಪಾತ್ರದಲ್ಲಿ ನಟಿಸಿದ್ದ ಅಟ್ಟಹಾಸ ಸಿನಿಮಾ 7 ವರ್ಷಗಳ ಹಿಂದೆ ಬಂದಿತ್ತು. ಇದೀಗ ಇದೇ ಕಥೆಯನ್ನ ಮತ್ತಷ್ಟು ವಿಸ್ತರಿಸಿ, 10 ಗಂಟೆಗಳ ವೆಬ್​ ಸೀರಿಸ್​ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.

ದಂತಚೋರ ವೀರಪ್ಪನ್ ಆರ್ಭಟದ ಕುರಿತ ನಿರ್ಮಾಣವಾಗಿದ್ದ ಅಟ್ಟಹಾಸ  ಸಿನೆಮಾ 2013ರಲ್ಲಿ ಬಿಡುಗಡೆಯಾಗಿ  ಸಿನಿ ರಸಿಕರ ಮನಗೆದ್ದಿತ್ತು. ಎ.ಎಂ.ಆರ್ ರಮೇಶ್ ಮತ್ತು ಕಿಶೋರ್​ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತ್ತು. ಇದೀಗ ಮತ್ತೆ ವೀರಪ್ಪನ್​ ಕಥೆಯನ್ನು ಕಿರುಪರದೆಯಲ್ಲಿ  ಹೇಳಲು ತಯಾರಿ ನಡೀತಿದೆ.

ಎರಡೂವರೆ ಗಂಟೆಗಳ ಅಟ್ಟಹಾಸ ಸಿನಿಮಾದಲ್ಲಿ ವೀರಪ್ಪನ್​​ ಆರ್ಭಟದ ಅಷ್ಟೂ ಕಥೆಯನ್ನ ಹೇಳೋದಕ್ಕೆ ಆಗಿರಲಿಲ್ಲ. ಈಗ ವೆಬ್​ ಸೀರಿಸ್​ ಟ್ರೆಂಡ್​ ನಡೀತಿದ್ದು, ಈಗ ಆ ಕಥೆಯನ್ನ ಸಂಪೂರ್ಣವಾಗಿ ಕಟ್ಟಿಕೊಡ್ತೀನಿ ಅಂತಿದ್ದಾರೆ ನಿರ್ದೇಶಕರು.

ಈಗಾಗಲೇ ಅಟ್ಟಹಾಸ ಚಿತ್ರಕ್ಕಾಗಿ ಶೂಟ್​ ಮಾಡಿದ್ದ ಒಂದಷ್ಟು ದೃಶ್ಯಗಳನ್ನ ವೆಬ್​ ಸರಣಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳು ವೆಬ್​ ಸರಣಿಯ ಶೂಟಿಂಗ್​ ಶುರುವಾಗಲಿದೆ. ಕಿಶೋರ್​ ಜೊತೆಗೆ ಬಾಲಿವುಡ್​ ಕಲಾವಿದರು ಅಟ್ಟಹಾಸ ವೆಬ್​ ಸೀರಿಸ್​ನಲ್ಲಿ ಬಣ್ಣ ಹಚ್ಚಲಿದ್ದಾರೆ. ಆಸ್ಫೋಟ ಅನ್ನೋ ಸಿನಿಮಾ ಕೈಗೆತ್ತಿಕೊಂಡಿದ್ದ ಎ.ಎಂ.ಆರ್​ ರಮೇಶ್​​​​ ಅದನ್ನ ಪಕ್ಕಕ್ಕಿಟ್ಟು ವೀರಪ್ಪನ್​ ಹಿಂದೆ ಬಿದ್ದಿದ್ದಾರೆ.

ವೆಬ್​ ಸೀರಿಸ್​ನಲ್ಲಿ ವೀರಪ್ಪನ್​​​ ಬಾಲ್ಯದಿಂದ ಹಿಡಿದು, ಸಾಯುವವರೆಗಿನ ಸಂಪೂರ್ಣ ಚಿತ್ರಣವನ್ನ ಕಟ್ಟಿಕೊಡಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಇಂಗ್ಲೀಷ್​, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ವೆಬ್​ ಸೀರಿಸ್​​ ಹವಾ ಜೋರಾಗಿದ್ದು, ವೀರಪ್ಪನ್​ ಅಟ್ಟಹಾಸದ ಮೂಲಕ ಕನ್ನಡದಲ್ಲೂ ವೆಬ್​ ಸೀರಿಸ್​ ಜಮಾನ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿದೆ.error: Content is protected !!
Scroll to Top