2020ರಲ್ಲಿ ಇಲ್ಲ 20-20 ವಿಶ್ವಕಪ್‌

ದುಬೈ: ಕೋವಿಡ್​ 19ನಿಂದಾಗಿ ಐಸಿಸಿ ಟಿ20 ವಿಶ್ವಕಪ್ 2020 ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದೆ. ಈ ಪಂದ್ಯಾವಳಿ ಈ ವರ್ಷ ಅಕ್ಟೋಬರ್ 18 ರಿಂದ ನವೆಂಬರ್ 15ರ ನಡುವೆ ಆಸ್ಟ್ರೇಲಿಯಾದಲ್ಲಿ ನತೆಯಬೇಕಿತ್ತು. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಈ ಟೂರ್ನಿಯನ್ನು ಕೋವಿಡ್​ 19 ಹಾವಳಿಯಿಂದಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಐಸಿಸಿ ಘೋಷಿಸಿದೆ.

ಇದೇ ವೇಳೆ ಭಾರತದಲ್ಲಿ ಆಡಲಿರುವ 2023ರ ವಿಶ್ವಕಪ್ ಸೇರಿದಂತೆ ಮುಂದೆ ಬರುವ ಮೂರು ವಿಶ್ವಕಪ್​ಗಳ ಪರಿಷ್ಕೃತ ದಿನಾಂಕವನ್ನು ಸಹ ಐಸಿಸಿ ಬಹಿರಂಗಪಡಿಸಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ಅಕ್ಟೋಬರ್ – ನವೆಂಬರ್ 2021 ರಂದು ಫೈನಲ್ ಪಂದ್ಯದೊಂದಿಗೆ 14 ನವೆಂಬರ್ 2021 ರಂದು ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.

ಐಸಿಸಿ ಪುರುಷರ ಟಿ 20 ವಿಶ್ವಕಪ್ 2022 ಅಕ್ಟೋಬರ್ – ನವೆಂಬರ್ 2022 ರಂದು ಫೈನಲ್ ಪಂದ್ಯದೊಂದಿಗೆ 13 ನವೆಂಬರ್ 2022 ರಂದು ನಡೆಯಲಿದೆ ಎಂದಿದೆ.

2023ರಲ್ಲಿ 50 ಓವರ್‌ಗಳ ಐಸಿಸಿ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ – ನವೆಂಬರ್ 2023ರಂದು ನಡೆಯಲಿದ್ದು, ಫೈನಲ್ 26 ನವೆಂಬರ್ 2023 ರಂದು ನಡೆಯಲಿದೆ ಎಂದು ಐಸಿಸಿ ಹೇಳಿದೆ.





























































error: Content is protected !!
Scroll to Top