ಚೆನ್ನೈ: ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿರುವ ನಳಿನಿ ಶ್ರೀಹರನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ. ಮೂರು ದಶಕಗಳಿಂದ ಜೈಲಿನಲ್ಲಿರುವ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ ಎಂದು ಆಕೆಯ ವಕೀಲ ಪುಗಲೆಂತಿ ತಿಳಿಸಿದ್ದಾರೆ. ರಾಜೀವ್ ಗಾಂಧಿ ಹಂತಕಿಗೆ ಬಿಡುಗಡೆ ಭಾಗ್ಯವಿಲ್ಲ ಕಳೆದ 29 ವರ್ಷಗಳಿಂದ ವೆಲ್ಲೂರು ಮಹಿಳಾ ಜೈಲಿನಲ್ಲಿರುವ ನಳಿನಿ ಶ್ರೀಹರನ್ ಇದೇ ಮೊದಲ ಬಾರಿಗೆ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ವಕೀಲ ಪುಗಲೆಂತಿ ಹೇಳಿದ್ದಾರೆ.
ಸಹ ಕೈದಿ ಜೊತೆ ಜಗಳ : ಘಟನೆಯ ಬಗ್ಗೆ ವಿವರಣೆ ನೀಡಿರುವ ವಕೀಲ ಪುಗಲೆಂತಿ, ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇನ್ನೊಬ್ಬ ಅಪರಾಧಿ ಜೊತೆ ನಳಿನಿ ಶ್ರೀಹರ್‌ಗೆ ಜಗಳ ಆಗಿದೆ. ಈ ವಿಚಾರವನ್ನು ಇತರೆ ಕೈದಿಗಳು ಜೈಲರ್‌ಗೆ ತಿಳಿಸಿದ್ದಾರೆ. ಆ ಬಳಿಕ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ. ಇದೇ ಮೊದಲ ಸಲ ಇಂತಹ ಘಟನೆಯಾಗಿರುವುದರಿಂದ ಈ ಬಗ್ಗೆ ನಿಖರವಾದ ಕಾರಣ ತಿಳಿಯಲು ನಾನು ಮುಂದಾಗಿದ್ದೇವೆ ಎಂದು ವಕೀಲ ಪುಗಲೆಂತಿ ಹೇಳಿದ್ದಾರೆ.
ಜೈಲು ಬದಲಾಯಿಸಲು ಪತಿ ಮನವಿ : ವೆಲ್ಲೂರು ಜೈಲಿನಲ್ಲಿ ನಳಿನಿ ಶ್ರೀಹರನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳಿಕ ಆಕೆಯ ಪತಿ ಮುರುಗನ್ ಪತ್ನಿಯನ್ನು ವೆಲೂರು ಜೈಲಿನಿಂದ ಪುಜಾಲ್ ಜೈಲಿಗೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಕೀಲರು ಜೈಲಿಗೂ ಭೇಟಿ ನೀಡಿ ಬಂದಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಮನವಿ ಸಹ ಮಾಡಲಾಗುವುದು ಎಂದು ವಕೀಲು ಪುಗಲೆಂತಿ ಹೇಳಿದ್ದಾರೆ.