ಜೊಹಾನ್ಸ್ ಬರ್ಗ್:ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿದ್ದ ಸಮಾಜಸೇವಕ ಮತ್ತು ಸ್ಥಳೀಯ ರಾಜಕಾರಣಿ ಜಯರಾಜ್ ಬಚು (75) ಕೊರೊನಾಗೆ ಬಲಿಯಾಗಿದ್ದಾರೆ.
ಹಿಂದೂ ಯುನೈಟೆಡ್ ಮೂವ್‍ಮೆಂಟ್ (ಹಮ್) ಎಂಬ ಏಕೈಕ ಹಿಂದೂ ಪಕ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿದ್ದ ಜಯರಾಜ್ ಸಮುದಾಯ ಮತ್ತು ಪೊಲಿಟಿಕಲ್ ಪಾರ್ಟಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಡರ್ಬನ್ ನಿವಾಸಿಯಾದ ಅವರಿಗೆ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯರಾಜ್ ಬಚು ಶುಕ್ರವಾರ ಸಂಜೆ ಇಹಲೋಕ ತ್ಯಜಿಸಿದರು. ಶನಿವಾರ ಅವರ ಅಂತ್ಯಸಂಸ್ಕಾರ ನೆರವೇರಿದೆ ಎಂದು ಅವರ ಪುತ್ರ ಉಮೇಶ್ ಬಚು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ರಾಷ್ಟ್ರೀಯ, ಪ್ರಾಂತೀಯ ಅಥವಾ ಸ್ಥಳೀಯ ಸರ್ಕಾರ-ಆಡಳಿತಗಳಲ್ಲಿ ಹಿಂದೂ ಸಮುದಾಯಕ್ಕೆ ಆದ್ಯತೆ ಮತ್ತು ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಐದು ದಶಕಗಳ ಹಿಂದೆಯೇ ಅವರು ಹಿಂದೂ ಮೂನಿಟಿ ಮೂವ್‍ಮೆಂಟ್ ಹೆಸರಿನ ಪಕ್ಷವನ್ನು ಸ್ಥಾಪಿಸಿದ್ದರು.