ವಿಯೆಟ್ನಾಂ: ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿ ಕೊರೊನಾ ಲಾಕ್ ಡೌನ್ ಬಳಿಕ ತೆರೆದಿರುವ ಈ ಹೊಟೇಲನ್ನು ನೋಡಿದರೆ ನೀವು ಹುಬ್ಬೇರಿಸುವುದು ಖಂಡಿತ.ಬಹುಮಹಡಿಗಳ ಔ ಯಂಚಗಾರಾ ಹೊಟೇಲ್ ಸಂಪೂರ್ಣ ಸ್ವರ್ಣಮಯ.ಅಂದರೆ ಹೊಟೃಲ್ ನ ಒಳಾಂಗಣ ಮತ್ತು ಹೊರಾಂಗಣವನ್ನು ಪೂರ್ಣವಾಗಿ ಚಿನ್ನದಿಂದ ಮಾಡಲಾಗೊದೆ.ಏಲ್ಲ ಬಿಟ್ಟು ಶೌಚಾಲಯದ ಕಮೋಡ್ , ಬೇಸಿನ್ ,ಬಾತ್ ಟಬ್ ಗಳಿಗೆ ಕೂಡ ಚಿನ್ನದ ಪ್ಲೇಟಿಂಗ್ ಮಾಡಲಾಗಿದೆ ಇಲ್ಲವೆ ಚಿನ್ನದ ತಗಡು ಮುಚದಚಲಾಗಿದೆ. ಹೋಟೆಲ್ ಬಗ್ಗೆ ಹೇಳುವುದಕ್ಕೆ ಹತ್ತಾರು ಕಾರಣಗಳು ಇವೆ. 24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಚಿನ್ನದ ಹೋಟೆಲ್ ಇದು. ಹೋಟೆಲ್ ಹೊರಭಾಗಕ್ಕೆ ಹಾಗೂ ಒಳಾಂಗಣದಲ್ಲಿ 24 ಕ್ಯಾರೆಟ್ ಚಿನ್ನದ ಪ್ಲೇಟ್ ಅಥವಾ ತಗಡುಗಳನ್ನು ಬಳಸಲಾಗಿದೆ. ಇದರ ನಿರ್ಮಾಣಕ್ಕೆ ಹನ್ನೊಂದು ವರ್ಷ ಹಿಡಿದಿದೆ.
ಹೋಟೆಲ್ ಹೆಸರು ಡಾಲ್ಸ್ ಹನೋಯಿ ಗೋಲ್ಡನ್ ಲೇಕ್. ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ ಈ ಹೋಟೆಲ್ ಇದೆ. 24 ಅಂತಸ್ತಿನಲ್ಲಿ 400 ಕೊಠಡಿಗಳಿವೆ. ಹೊವಾ ಬಿನ್ಹ್ ಗ್ರೂಪ್ ಗಾಗಿ ಅಮೆರಿಕನ್ ವೈಂಢಮ್ ಹೋಟೆಲ್ ಬ್ರ್ಯಾಂಡ್ ನವರು ಇದನ್ನು ನಡೆಸುತ್ತಾರೆ.
ಈ ಹೋಟೆಲ್ ನಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ 250 ಅಮೆರಿಕನ್ ಡಾಲರ್ ಆಗುತ್ತದೆ. ಭಾರತದ ರುಪಾಯಿಗಳಲ್ಲಿ 18 ಸಾವಿರಕ್ಕಿಂತ ಸ್ವಲ್ಪ ಜಾಸ್ತಿ. ಇಲ್ಲಿ ಬಾತ್ ಟಬ್, ಸಂಡಾಸು, ಛಾವಣಿ ಹೀಗೆ ಎಲ್ಲಿ ಕಣ್ಣು ಹಾಯಿಸಿದರೂ ಎಲ್ಲವೂ ಗೋಲ್ಡ್ ಪ್ಲೇಟೆಡ್. ಕೊನೆಗೆ ಇಲ್ಲಿನ ಈಜುಕೊಳ ನೋಡಿದರೆ ಅದು ಕೂಡ ಚಿನ್ನದ್ದೇ ಒಟ್ಟಾರೆ 1 ಟನ್ ಗೂ ಅಧಿಕ ಚಿನ್ನವನ್ನು ಈ ಹೊಟೇಲ್ ಗಾಗಿ ಬಳಸಲಾಗಿದೆ.