ನರೇಂದ್ರ ಮೋದಿ ಲಡಾಖ್ ಗೆ ಹೋದದ್ದೇಕೆ?

ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ದಿಢೀರ್‌ ಎಂದು ಲಡಾಖ್ಗೆ ಭೇಟಿ ನೂಡಿರುವ ಬೆಳವಣಿಗೆ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವ ಕಾರಣ ಸೈನಿಕರನ್ನು ಹುರಿದುಂಬಿಸಲು ದೇಶದ ಪ್ರಧಾನಿ ಯುದ್ಧದ ಮುಂಚೂಣಿ ನೆಲೆಗೆ ಭೇಟಿ ನೀಡಿರುವುದು ಸಮಯೋಚಿತ ಹೌದಾಗಿದ್ದರೂ ಈ ಭೇಟಿ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎನ್ನುವುದು ಈಗ ಚರ್ಚೆಯಾಗುತ್ತಿರುವ ವಿಷಯ ಅದೇನೆ ಇದ್ದರೂ     ಸಮುದ್ರ ಮಟ್ಟದಿಂದ 11 ಸಾವಿರಗಳ ಅಡಿಗಳ ಮೇಲೆ ನೀಮುವಿನ ಬೇಸ್ ಕ್ಯಾಂಪ್ ನಲ್ಲಿ ಭಾರತ್ ಮಾತಾಕಿ ಜೈ.. ಭಾರತ್ ಮಾತಾಕಿ ಜೈ…ಅಂಥ ಬೆಳಂಬೆಳಗ್ಗೆ ಘೋಷಗಳು ಮೊಳಗಿದ್ದು ಇಡೀ ಪ್ರಪಂಚದಲ್ಲಿ  ಸಂಚಲನ ಮೂಡಿಸಿದೆ. 

ಚೀನದ ಜತೆ ನಡೆದ ಘರ್ಷಣೆಯಲ್ಲಿ  ಹುತಾತ್ಮರಾದವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ  ದಿಢೀರ್ ಲೇಹ್ -ಲಡಾಖ್ ಸೇನಾ ಬೇಸ್ ಕ್ಯಾಂಪ್ ನಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ಇಡೀ ವಿಶ್ವದ ಕಣ್ಣು ಭಾರತದ ಕಡೆ ನೋಡುವಂತಾಯ್ತು.

27 ನಿಮಿಷದ ಗುಡುಗು…

ಜಂಸ್ಕಾರ್ ಪರ್ವತ ಶ್ರೇಣಿಯ ಸಿಂಧೂ ನದಿಯ ದಡದಲ್ಲಿನ ದುರ್ಗಮವಾದ ಲಡಾಕ್ ಸಮೀಪದ ನೀಮು ಸೇನಾ ಬೇಸ್ ಕ್ಯಾಂಪ್ ನಲ್ಲಿ ನಿಂತು, ಪಕ್ಕದಲ್ಲೇ ಇರುವ ಚೀನಕ್ಕೆ ಕೇಳುವಂತೆ ಪ್ರಧಾನಿ ಎಚ್ಚರಿಸಿದ್ದು, ಸುಮಾರು 27 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ಸೈನಿಕರನ್ನು ಹುರಿದುಂಬಿಸಿದ್ದರು.

ಗಾಲ್ವಾನ್ ನದಿಯ ದಡದಲ್ಲಿ ಭಾರತೀಯ ಯೋಧರು ನಡೆಸಿದ ಹೋರಾಟವನ್ನು ಈ ಸಂದರ್ಭದಲ್ಲಿ ಮೋದಿ  ಸ್ಮರಿಸಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.  ಸೈನಿಕರ ಹೋರಾಟ 130 ಕೋಟಿ ಭಾರತೀಯರು ನಿಶ್ಚಿಂತೆಯಿಂದ ಇರುವಂತೆ ಮಾಡಿದೆ ಎನ್ನುವ ಮೂಲಕ ಸೈನಿಕರನ್ನು ಶೌರ್ಯವನ್ನು ಕೊಂಡಾಡಿದರು. ಇದೇ ವೇಳೆ ಭಾರತ ಮಾತೆ, ಭಾರತದ ಗಡಿಗಳನ್ನು ಕಾಯುತ್ತಿರುವ ಯೋಧರಿಗೆ ಜನ್ಮ ನೀಡಿದ ವೀರಮಾತೆಯರಿಗೆ ನಮಿಸಿದರು. ಸಂಘರ್ಷದಲ್ಲಿ ಗಾಯಗೊಂಡಿರುವ ವೀರಯೋಧರ ಯೋಗಕ್ಷೇಮ ವಿಚಾರಿಸಿದರು.

ನೇರ ಎಚ್ಚರಿಕೆ?

ಸಾಮಾನ್ಯವಾಗಿ ದೇಶಗಳ ನಡುವೆ ಸಂಘರ್ಷ ಉಂಟಾದಾಗ ಮೂರ್ನಾಲ್ಕು ರೀತಿಯ ಪ್ರಕ್ರಿಯೆಗಳು ನಡೆಯುತ್ತವೆ. ಮೊದಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಸುಮಾರು ನಾಲ್ಕೈದು ಹಂತಗಳಲ್ಲಿ ಅಂದರೆ ಮೇಜರ್ ಜನರಲ್‌ ಅಧಿಕಾರಿಗಳ ಮಟ್ಟದ ತನಕ ಎರಡು ದೇಶಗಳ ನಡುವೆ ಮಾತುಕತೆ ನಡೆಯುತ್ತೆ. ಇದರ ಜೊತೆಗೆ ವಿದೇಶಾಂಗ ಇಲಾಖೆಯ ಮಟ್ಟದಲ್ಲಿ ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ನಡೆಸ್ತಾರೆ. ಕೊನೆಗೆ ಆ ರಾಷ್ಟ್ರ ಗಳ ಮುಖ್ಯಸ್ಥರು ಮಾತುಕತೆ ನಡೆಸುತ್ತಾರೆ.

ಇಷ್ಟರ ನಡುವೆ ಎರಡು ರಾಷ್ಟ್ರ ಗಳು ಒಪ್ಪಿದರೆ ಎರಡು ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು ಸಮಸ್ಯೆ ಬಂದಾಗ ಮಾತುಕತೆ ನಡೆಸುತ್ತಾರೆ. ಚೀನ ವಿಷಯದಲ್ಲಿ ಇವೆಲ್ಲಾ ಹಂತಗಳು ದಾಟಿವೆ ಜೊತೆಗೆ ಇವೆಲ್ಲಾ ಹಂತಗಳಲ್ಲಿ  ಮಾತುಕತೆಗಳು ನಡೆದಿವೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇನ್ನು ಮಾತುಕತೆಗಳು ನಡೆಯುತ್ತಿವೆ ಕೂಡ.

ಇಷ್ಟರ ನಡುವೆ ಸೇನೆಯ ಬೇಸ್ ಕ್ಯಾಂಪ್ ಪ್ರಧಾನಿ ಭೇಟಿ ಕೊಟ್ಟಿದ್ದು ಚೀನ ಜೊತೆ ಪಕ್ಕದ ಪಾಕಿಸ್ಥಾನಕ್ಕೂ ಕೂಡ ಪರೋಕ್ಷವಾಗಿ ನೀಡಿಹ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತಿದೆ.

ಚೀನವಜ್ಜು ಮಣಿಸಲು ಈಗಾಗಲೇ 59 ಆಪ್ ಗಳ ಬ್ಯಾನ್, ಹೆದ್ದಾರಿ ಯೋಜನೆಗಳ ಟೆಂಡರ್ ರದ್ದು, ವಿದ್ಯುತ್ ಕ್ಷೇತ್ರದಲ್ಲಿ ಉಪಕರಣಗಳು ಆಮದು ಮಾಡದಿರಲು ನಿರ್ಧಾರ ಇಂಥ ಹಲವು ಕ್ರಮಗಳು ನಡೆಸಿಯಾಗಿದೆ. ಆದರೆ ಸಂಘರ್ಷದ ಹೊತ್ತಲ್ಲಿ ಪ್ರಧಾನಿಯೊಬ್ಬರು ಸೇನಾ ಬೇಸ್ ಕ್ಯಾಂಪ್ ಗೆ ಭೇಟಿ ಕೊಟ್ಟಿರುವುದರ ಹಿಂದೆ ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ಗಳು ಕಾದಿವೆ ಅನ್ನೋದು  ಸೇನೆಯ ಮರ್ಮ  ಬಲ್ಲವರು ಹೇಳುವ ಮಾತು.

Latest Articles

error: Content is protected !!