ಎಬಿಡಿ –ಸ್ಮಿತ್‌ ಗೆ ಬೌಲಿಂಗ್‌ ಮಾಡುವ ಬಗ್ಗೆ ಕುಲದೀಪ್‌ ಹೇಳಿದ್ದೇನು?

ದಿಲ್ಲಿ : ಎಬಿ ಡಿವಿಲಿಯರ್ಸ್‌ ಹಾಗೂ ಸ್ಟೀವ್‌ ಸ್ಮಿತ್‌ ಇವರಿಬ್ಬರಿಗೂ ಬೌಲಿಂಗ್‌ ಮಾಡುವುದು ದೊಡ್ಡ ಸವಾಲಿನ ಕೆಲಸ ಎಂದು ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರು ಹೇಳಿಕೊಂಡಿದ್ದಾರೆ.

ಇಎಸ್‌ಪಿಎನ್ ‌ಕ್ರಿಕ್‌ಇನ್ಫೊ ವಾಹಿನಿಯಲ್ಲಿ ನಡೆದ ಕ್ರಿಕೆಟ್‌ಬಾಜಿ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಅವರೊಂದಿಗೆ ಮಾತನಾಡಿರುವ ಅವರು, ಸ್ವೀವ್​ ಸ್ಮಿತ್‌ ಅವರು ನನ್ನ ಎಸೆತಗಳಿಗೆ ಬ್ಯಾಕ್‌ಫೂಟ್‌ ತೆಗೆದುಕೊಂಡು ಬ್ಯಾಟ್​ ಬೀಸುತ್ತಾರೆ. ತಡವಾಗಿ ಬ್ಯಾಟ್‌ ಬೀಸುತ್ತಾರೆ. ಹೀಗಾಗಿ ಸ್ಮಿತ್​ಗೆ ಬೌಲಿಂಗ್‌ ಮಾಡುವುದು ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

ಏಕದಿನ ಸ್ವರೂಪದಲ್ಲಿ ಎಬಿಡಿ ಉತ್ತಮ ಆಟಗಾರ. ಅವರಲ್ಲೊಂದು ವಿಶಿಷ್ಟ ಶೈಲಿಯಿದೆ. ಈಗ ಅವರು ವಿದಾಯ ಹೇಳಿದ್ದಾರೆ. ಇದು ಸಂತಸದ ಸಂಗತಿ ನನ್ನ ಬೌಲಿಂಗ್‌ನಲ್ಲಿ ಅವರಷ್ಟು ರನ್‌ ಹೊಡೆಯುವ ಇತರ ಬ್ಯಾಟ್ಸ್‌ಮನ್‌ನನ್ನು ಕಂಡಿಲ್ಲ ಎಂದು ಕುಲದೀಪ್‌ ಯಾದವ್​ ಅವರು ನುಡಿದರು.error: Content is protected !!
Scroll to Top