ಮೋದಿ ಲಡಾಕ್‌ ಭೇಟಿಗೆ ಚೀನ ಲೇವಡಿ

ದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್ಗೆ ಭೇಟಿ ನೀಡಿದ ಅಚ್ಚರಿಯ ಬೆಳವಣಿಗೆಗೆ ಚೀನ ವ್ಯಂಗ್ಯವಾಗಿ  ಪ್ರತಿಕ್ರಿಯಿಸಿದೆ. ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದೆ, ಹಂತದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಅಂತ ಹೇಳಿಕೊಂಡಿದ್ದಾರೆ.

ಸಿಒಎಎಸ್ ಜನರಲ್ ನರವಣೆ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಪಿಎಂ ಮೋದಿ ಇಂದು ಲಡಾಕ್‌ನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದರು.ಎಲ್‌ಎಸಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿಗೆ ಭಾರತೀಯ ಸೇನೆಯ 14 ಕಾರ್ಪ್ಸ್ ಕಮಾಂಡರ್ ವಿವರಿಸಿದರು.







































error: Content is protected !!
Scroll to Top