ಆ. 30 : ರಂಗನಪಲ್ಕೆಯಲ್ಲಿ ಅಮ್ಮ ಸಭಾಭವನ – ಕಲ್ಯಾಣ ಸಿಂಧೂರ ಉದ್ಘಾಟನೆ

ಕಾರ್ಕಳ : ಕೌಡೂರು – ರಂಗನಪಲ್ಕೆಯಲ್ಲಿ ಆ. 30ರಂದು ಬೆಳಿಗ್ಗೆ 9.30ಕ್ಕೆ ಅಮ್ಮ ಸಭಾಭವನ – ಕಲ್ಯಾಣ ಸಿಂಧೂರ ಲೋಕಾರ್ಪಣೆಗೊಳ್ಳಲಿದೆ.
ಶಾಂತ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್‌, ಪಳ್ಳಿ – ಅಡಪಾಡಿ ಶ್ರೀ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್‌, ಪಳ್ಳಿ ಶ್ರೀ ಮಂಗಲ್ದಿ ಮಠದ ಅರ್ಚಕ ಗಣಪತಿ ಭಟ್‌, ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ಜಿ. ಪಂ. ಮಾಜಿ ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್‌, ಎಲಿಯಾಳ ಪಟ್ಟದ ಚಾವಡಿಯ ಜೀವನ್‌ ಮಾಡ ಹಾಗೂ ಉದ್ಯಮಿ ಆಕಾಶ್‌ ಶೆಟ್ಟಿ ಭಾಗಿಯಾಗಲಿದ್ದಾರೆ.

11 ಗಂಟೆಯಿಂದ ಕರ್ಲಸ್‌ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿ ಸಂದೇಶ್‌ ನೀರುಮಾರ್ಗ ಮತ್ತು ಬಳಗದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ಕೀರ್ತಿ ಮಂಗಳೂರು ಹಾಗೂ ರಂಜಿತ್‌ ಶೆಟ್ಟಿ ಕೌಡೂರು ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಸಭಾಭವನದ ಮಾಲಕರಾದ ಸೌಮ್ಯ ಜಯನಂದ ಅಮೀನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.















































































































































error: Content is protected !!
Scroll to Top