ಬೆಂಗಳೂರು : ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುವ ದೇಶದ್ರೋಹಿಗಳೇ ತಾಕತ್ತಿದ್ರೆ ಆರ್‌ಎಸ್‌ಎಸ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಆರೆಸ್ಸೆಸ್, ಬಿಜೆಪಿಗೆ ಸವಾಲು ಹಾಕಿದರು.
ಆ. 21ರಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಂದೇ ಮಾತರಂ ಎರಡು ಚರಣ ಮಾತ್ರ ಹಾಡುತ್ತೇವೆ. CWC ಸರಿಯಾದ ನಿರ್ಣಯವನ್ನು ತೆಗೆದುಕೊಂಡಿದೆ. ನಾವು ಇದನ್ನ ಸ್ವಾಗತಿಸುತ್ತೇನೆ. ಬಿಜೆಪಿಯವರು ಏನೇ ಕಾನೂನು ತರಲಿ, ಇವರು ನಮ್ಮನ್ನು ಗಲ್ಲಿಗಾದರೂ ಹಾಕಲಿ, ಫಾಸಿಯಾದರೂ ಹಾಕಲಿ, ಜೈಲಿಗಾದರೂ ಹಾಕಲಿ ನಾವು ಹಾಡುವುದು ಎರಡೇ ಚರಣ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ, ಆರೆಸ್ಸೆಸ್ ದೇಶದ್ರೋಹಿಗಳು ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾನು ದೇಶದ್ರೋಹಿಗಳಿಗೆ ಸವಾಲು ಹಾಕುತ್ತೇನೆ ಆರೆಸ್ಸೆಸ್ ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ. ಸಂಘದಲ್ಲಿ ರಾಷ್ಟ್ರಗೀತೆ ಹಾಡದವರು ವಂದೇ ಮಾತರಂ ಹಾಡಲು ಹೇಳಲು ಬರ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇವರೆಲ್ಲ ಕಂಗನಾ ಅಭಿಮಾನಿಗಳು
ಬಿಜೆಪಿಯವರು, ಚಡ್ಡಿ ಹಾಕುವವರು ಇವರೆಲ್ಲ ಕಂಗನಾ ರಣಾವತ್ ಅಭಿಮಾನಿಗಳು. ಇವರು ಕಂಗನಾ ಹಾಡನ್ನೇ ಬೇಕಿದ್ದರೆ ಪಾರ್ಲಿಮೆಂಟ್‌ಗೆ ತಂದು ರಾಷ್ಟ್ರಗೀತೆ ಮಾಡ್ತಾರೆ. ಈ ಬಿಜೆಪಿಯವರು ರಣಹೇಡಿಗಳು ಪಾರ್ಲಿಗೆಂಟ್‌ಗೆ ಬರುವ ಧೈರ್ಯವೂ ಇಲ್ಲದ ಹೇಡಿಗಳು. ಆದರೆ ಪ್ರತಿಪಕ್ಷಗಳು ಸದನ ನಡೆಯಲು ಬಿಡುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಾರೆ ಎಂದು ಕಟುವಾಗಿ ವಾಗ್ವಾಳಿ ನಡೆಸಿದರು.


















