ಕೇಂದ್ರದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು : ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿಧಾನಸಭೆಯಲ್ಲಿ ಇಂದು ಕೇಂದ್ರದ ಏಳನೇ ಕರಡು ಅಧಿಸೂಚನೆ ವಿರೋಧಿಸಿ ನಡೆದ ಚರ್ಚೆಗೆ ಉತ್ತರ ಕೊಡುವಾಗ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ಇದೆ. ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಕೇಂದ್ರದ ಅಧಿಸೂಚನೆಯನ್ನು ತಿರಸ್ಕರಿಸಲಾಗುತ್ತದೆ ಎಂದರು.

ವಿಧಾನಸಭೆಯಲ್ಲಿಂದು ನಿಯಮ 69 ರಡಿ ಕೇಂದ್ರ ಹೊರಡಿಸಿದ ಏಳನೇ ಕರಡು ಅಧಿಸೂಚನೆ ವಿರೋಧಿಸಿ ಶಾಸಕರಾದ ಎ ಎಸ್ ಪೊನ್ನಣ್ಣ, ತಮ್ಮಯ್ಯ, ಟಿ ಡಿ ರಾಜೇಗೌಡ ಚರ್ಚೆ ಮಾಡಿದರು. ಶಾಸಕರು ವರದಿ ಜಾರಿಯಾದರೆ ಏನೆಲ್ಲ ಪರಿಣಾಮ ಆಗಲಿದೆ ಎಂದು ಹಲವು ಆತಂಕಗಳನ್ನು ವ್ಯಕ್ತಪಡಿಸಿದರು. ಸರ್ಕಾರ ಅಧಿಸೂಚನೆ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ
ಕೇಂದ್ರ ಪರಿಸರ ಸಚಿವಾಲಯ 2014ರಿಂದ ಈವರೆಗೆ ಏಳು ಬಾರಿ ಕರಡು ಅಧಿಸೂಚನೆ ಹೊರಡಿಸಿದೆ. ಇತ್ತೀಚಿಗೆ ಜುಲೈ 27, 2026ರಂದು ಕೇಂದ್ರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯಲ್ಲಿ ಒಟ್ಟು 56,825.7 ಚದರ ಕಿ.ಮೀ. ಪ್ರದೇಶವನ್ನು ಸೂಕ್ಷ್ಮ ಪ್ರದೇಶಗಳಾಗಿ ಪ್ರಸ್ತಾಪಿಸಲಾಗಿದೆ.

ಕರ್ನಾಟಕ: 20,668 ಚ.ಕಿ.ಮೀ.
ಮಹಾರಾಷ್ಟ್ರ: 17,340 ಚ.ಕಿ.ಮೀ.
ಕೇರಳ: 9,993.7 ಚ.ಕಿ.ಮೀ.
ತಮಿಳುನಾಡು: 6,914 ಚ.ಕಿ.ಮೀ.
ಗೋವಾ: 1,461 ಚ.ಕಿ.ಮೀ.
ಗುಜರಾತ್: 449 ಚ.ಕಿ.ಮೀ.

ಕರ್ನಾಟಕ, ಕೇರಳದಲ್ಲಿ ವಿರೋಧ
ಗುಜರಾತ್, ಮಹಾರಾಷ್ಟ್ರ, ಗೋವಾ ಭಾಗಶಃ ಒಪ್ಪಿಗೆ ನೀಡಿವೆ. ಆದರೆ ಕರ್ನಾಟಕ ಮತ್ತು ಕೇರಳ ವಿರೋಧ ಮುಂದುವರಿಸುತ್ತಿವೆ. ಕೇಂದ್ರ ಸರ್ಕಾರವು ಸಂಜಯ್ ಕುಮಾರ್ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸಿದ್ದು, 2027ರವರೆಗೆ ಅದರ ಅವಧಿ ವಿಸ್ತರಿಸಲಾಗಿದೆ. ಹಂತಹಂತವಾಗಿ (ರಾಜ್ಯವಾರು) ಅಧಿಸೂಚನೆ ಸಾಧ್ಯ ಎಂದು ನಿಬಂಧನೆ ಸೇರಿಸಲಾಗಿದೆ. 60 ದಿನಗಳ ಆಕ್ಷೇಪಣೆ ಅವಧಿ ಇದೆ.

ವಿಧಾನಸಭೆಯಲ್ಲಿ ಇಂದು ಚರ್ಚೆ
ಕರ್ನಾಟಕ ವಿಧಾನಸಭೆಯಲ್ಲಿ ಕೊಡಗು ಶಾಸಕ ಎ.ಎಸ್. ಪೊನ್ನಣ್ಣ ಅವರು ವಿಷಯ ಮಂಡಿಸಿ ಚರ್ಚೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ಮರಣ ಶಾಸನ ಎಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ ಮತ್ತು ಹೊಸ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.





























































































































error: Content is protected !!
Scroll to Top