ರೆಂಜಾಳ ಭೂಕುಸಿತ ಪ್ರದೇಶದಲ್ಲಿ ಜಿಎಸ್‌ಐ ತಂಡದಿಂದ ಪರಿಶೀಲನೆ

ಕಾರ್ಕಳ : ರೆಂಜಾಳ ಗ್ರಾಮದ ಹೇಡ್ಮೆ ಪ್ರದೇಶದಲ್ಲಿ ಉಂಟಾಗಿರುವ ಭೂಕುಸಿತ ಪ್ರದೇಶಕ್ಕೆ ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಬೆಂಗಳೂರು ತಂಡ ಆ. 5ರಂದು ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

ಹೇಡ್ಮೆಯ ಹರಿಪ್ರಸಾದ್ ಹಾಗೂ ಸುಮಿತ್ರ ಎಂಬವರ ಮನೆಯ ಸಮೀಪ ಭೂಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಆ.4ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಅವರು ಜಿಎಸ್‌ಐ ತಂಡವನ್ನು ಕರೆಸಿ ಪರಿಶೀಲನೆ ನಡೆಸುವಂತೆ ಕಾರ್ಕಳ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದರು. ಅದರಂತೆ ತಹಶೀಲ್ದಾರ್ ಜಿಎಸ್‌ಐ ತಂಡವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಕಾರ್ಕಳ ಕಂದಾಯ ನಿರೀಕ್ಷ ರಿಯಾಜ್‌, ಗ್ರಾಮ ಆಡಳಿತ ಅಧಿಕಾರಿ ಆದರ್ಶ್‌ ಹಾಜರಿದ್ದರು.









































error: Content is protected !!
Scroll to Top