ಲಾವಣ್ಯ ಕೊಲೆ ಪ್ರಕರಣದ ಆರೋಪಿ ಬಿಲ್ಲವ ಸಮುದಾಯದ ಯುವಕನೆಂದು ಬಿಂಬಿಸಿ ಪೋಸ್ಟ್ – ಹರ್ಷ ಕೆ. ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ಕಾರ್ಕಳ : ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಿಲ್ಲವ ಸಮುದಾಯದ ಯುವಕನೆಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಹರ್ಷ ಕೆ. ಶೆಟ್ಟಿ ಎಂಬಾತನ ವಿರುದ್ಧ ಜು. 17ರಂದು ಕಾರ್ಕಳ ಯೂತ್‌ ಬಿಲ್ಲವ ಸಂಘಟನೆ ಅಧ್ಯಕ್ಷ ಶರತ್‌ ಬೈಲಡ್ಕ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ರಾಮ ಸೇನೆ ಕಾರ್ಕಳ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಹರ್ಷ ಕೆ. ಶೆಟ್ಟಿಯ ಮೊಬೈಲ್ ಸಂಖ್ಯೆಯಿಂದ (9986209956) ಯಾವುದೇ ಅಧಿಕೃತ ಮಾಹಿತಿ ಅಥವಾ ತನಿಖಾ ವರದಿಯ ಆಧಾರವಿಲ್ಲದೆ ಲಾವಣ್ಯಳ ಕೊಲೆ ಮಾಡಿದ ಆರೋಪಿ ಬಿಲ್ಲವ ಸಮುದಾಯಕ್ಕೆ ಸೇರಿದವನಾಗಿದ್ದು ಎಂದು ಸುಳ್ಳು ಬರೆದು, ವಿಡಿಯೋ ಮತ್ತು ಪೋಸ್ಟರ್ ಹಂಚಿಕೊಂಡಿದ್ದಾನೆ. ಈ ಮೂಲಕ ಬಿಲ್ಲವ ಸಮಾಜವನ್ನು ನಿಂದಿಸಿ, ವಿವಿಧ ಸಂಘ, ಮತ, ಧರ್ಮ, ಜನಾಂಗದ, ಸಮುದಾಯಗಳ ನಡುವೆ ವೈಷಮ್ಮ, ವೈರತ್ನವನ್ನು ಉತ್ತೇಜಿಸುವ ದುರುದ್ದೇಶದ ಹೊಂದಿದ್ದು, ಆದ್ದರಿಂದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭ ಸಂಘಟನೆಯ ಕಾರ್ಯದರ್ಶಿ ಅಭಿಲಾಷ್‌ ಕೋಟ್ಯಾನ್, ರವೀಂದ್ರ ಪೂಜಾರಿ, ಜಗದೀಶ್‌ ಕೋಟ್ಯಾನ್‌, ರಾಕೇಶ್‌ ಅಮೀನ್‌, ಸುಧೀರ್‌ ಅಮ್ಮಾಸ್‌, ಶಿವಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.























































error: Content is protected !!
Scroll to Top