ಸ್ಕೂಟರ್‌ಗೆ ಡಿಕ್ಕಿ – ಕಾರಿನೊಂದಿಗೆ ಚಾಲಕ ಪರಾರಿ

ಹೆಬ್ರಿ : ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಾರಿನೊಂದಿಗೆ ಚಾಲಕ ಪರಾರಿಯಾದ ಘಟನೆ ಜೂ. 16ರಂದು ಹೆಬ್ರಿಯಲ್ಲಿ ನಡೆದಿದೆ. ಸೀತಾನದಿ ನಾಡ್ಪಾಲು ಗ್ರಾಮದ ಹರ್ಷಿಣಿ ಅವರು ಸ್ಕೂಟರ್‌ನಲ್ಲಿ ಹೆಬ್ರಿಯಿಂದ ಮೇಗದ್ದೆ ರಸ್ತೆಯಾಗಿ ಸೀತಾನದಿ ನೆಲ್ಲಿಕಟ್ಟೆ ತಿಂಗಳೆ ಗರಡಿ ಬಳಿ ಹೋಗುತ್ತಿದ್ದಾಗ ಕೂಡ್ಲು ಫಾಲ್ಸ್‌ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಹರ್ಷಿಣಿ ಅವರು ಗಾಯಗೊಂಡಿದ್ದು, ಅಪಘಾತ ವೆಸಗಿದ ಚಾಲಕ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.































error: Content is protected !!
Scroll to Top