ಫುಟ್‌ಪಾತ್, ಚರಂಡಿ, ರಸ್ತೆ ಅಭಿವೃದ್ಧಿ, ದಾರಿ ದೀಪ ಅಳವಡಿಕೆ
ಕಾರ್ಕಳ : ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸರ್ವಜ್ಞ ವೃತ್ತ ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿಪಡಿಸಿ, ಚರಂಡಿ, ಫುಟ್‌ಪಾತ್, ನಿರ್ಮಾಣ ಮಾಡಲಾಗುವುದು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಮಾ. 3ರಂದು ಜೈನ್ ಹೊಟೇಲ್ ಬಳಿಯಲ್ಲಿ ಈ ಕುರಿತು ಲೋಕೋಪಯೋಗಿ ಇಂಜಿನೀಯರ್ ಸೋಮಶೇಖರ್ ಅವರೊಂದಿಗೆ ಚರ್ಚಿಸಿದರು. ಸಾಲ್ಮರದಿಂದ ಸರ್ವಜ್ಞ ವೃತ್ತ ಬಳಿವರೆಗಿನ ರಸ್ತೆ, ಚರಂಡಿ ನಿರ್ಮಾಣದೊಂದಿಗೆ ದಾರಿದೀಪ ಅಳವಡಿಸಲಾಗುವುದು. ಸರ್ವಜ್ಞ ವೃತ್ತವನ್ನು ಮತ್ತಷ್ಟು ಸುಂದರಗೊಳಿಸಿ, ತಾಲೂಕು ಕಚೇರಿ, ವಾಜಪೇಯಿ ಪಾರ್ಕ್ ಪರಿಸರವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಉದ್ಯಮಿ ಅರುಣ್ ನಿಟ್ಟೆ, ರಾಕೇಶ್ ಶೆಟ್ಟಿ ಕುಕ್ಕುಂದೂರು, ಗುಣಪಾಲ್ ಜೈನ್, ರಾಜೇಶ್ ರಾವ್ ಪರಪು, ಚಂದ್ರಶೇಖರ್ ಮೂಲ್ಯ, ಪ್ರತಾಪ್ ಮಾಬಿಯಾನ್, ಧನುಷ್ ಆಚಾರ್ಯ ಮತ್ತಿತರರು ಈ ಸಂದರ್ಭದಲ್ಲಿದ್ದರು.





















