ಅಕ್ಕನ ಮೇಲೆ ತಮ್ಮನಿಂದ ಹಲ್ಲೆ – ಪ್ರಕರಣ ದಾಖಲು

ಕಾರ್ಕಳ : ಅಕ್ಕನ ಮೇಲೆ ತಮ್ಮ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂತಾವಾರ ಗ್ರಾಮದ ಸ್ವಾತಿ ಶೆಟ್ಟಿ ಎಂಬವರು ತಾಯಿ ಪುಷ್ಪ ಡಿ. ಶೆಟ್ಟಿಯವರೊಂದಿಗೆ ವಾಸವಾಗಿರುತ್ತಾರೆ. ಫೆ. 25ರಂದು ಅವರು ನಾಗಬನದಲ್ಲಿ ಪೂಜೆ ಮುಗಿಸಿ ಮನೆಯಲ್ಲಿದ್ದಾಗ ಸ್ವಾತಿ ಅವರ ತಮ್ಮ ಅಭಿನಂದನ್, ಅಡ್ಯಂತಾಯ ಅವರ ಮನೆಗೆ ಬಂದು ಪೂಜೆ ಮಾಡಿದ ನಾರಾಯಣ ಭಟ್ಟರಿಗೆ ಅವಾಚ್ಯ ಶಬ್ದಗಳಿಂದ ಬೈಯಲು ಪ್ರಾರಂಭಿಸಿದ್ದು, ಆ ವೇಳೆ ತಾಯಿ ನಾರಾಯಣ ಭಟ್ಟರಿಗೆ ಜೋರು ಮಾಡಬೇಡ ಎಂದು ಹೇಳಿದಾಗ ಆಪಾದಿತನು ಮನೆಯಲ್ಲಿದ್ದ ಮಣ್ಣಿನ ಮಡಕೆಯೊಂದು ಒಡೆದಿರುತ್ತಾನೆ. ಅಲ್ಲದೆ ಸ್ವಾತಿ ಶೆಟ್ಟಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸ್ವಾತಿ ಶೆಟ್ಟಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.









































error: Content is protected !!
Scroll to Top