ಇಂದು ವರ್ಷದ ಮೊದಲ ಚಂದ್ರಗ್ರಹಣ

ಬೆಂಗಳೂರು : ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನವಾದ ಇಂದು ಸಂಭವಿಸುತ್ತಿದೆ. ಗ್ರಹಣದ ಸ್ಪರ್ಶ ಕಾಲವು ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ, ಮಧ್ಯಮ ಕಾಲವು ಸಂಜೆ 4 ಗಂಟೆ 29 ನಿಮಿಷಕ್ಕೆ ಮತ್ತು ಮೋಕ್ಷ ಕಾಲವು ಸಂಜೆ 6 ಗಂಟೆ 19 ನಿಮಿಷಕ್ಕೆ ಆಗಿರುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲಾಗುವುದು ಮತ್ತು ಹೆಚ್ಚು ಪ್ರಯಾಣಿಸುವುದು ಶುಭಕರವಲ್ಲ. ಹೀಗಾಗಿ ರಾಜ್ಯದ ಹಲವು ದೇವಾಲಯಗಳಲ್ಲಿ ಗ್ರಹಣ ಸ್ಪರ್ಶವಾಗದಂತೆ ಗರ್ಭಗುಡಿಗಳನ್ನ ಮುಚ್ಚಲಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಯಾವ ರಾಶಿಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಈ ಕೆಳಗಿನಂತೆ ವಿವರಿಸಿದ್ದಾರೆ.

  • ಮೇಷ ರಾಶಿ
    – 5ನೇ ರಾಶಿಯಲ್ಲಿ ಗ್ರಹಣ ಆಗುತ್ತಿರುವ ಕಾರಣ ಮಿಶ್ರಫಲ.
    – ಮಕ್ಕಳ ಸಂತಾನ ವಿಚಾರದಲ್ಲಿ ಹೆಚ್ಚಿನ ಗಮನಕೊಡಬೇಕು.
    – ಶುಭನು ಆಗಬಹುದು ಅಶುಭವು ಆಗಬಹುದು.

ಪರಿಹಾರ
– ದೇವತಾರಾಧನೆ ಮಾಡಬೇಕು
– 48 ದಿನ ಹೊಸ ಕಾರ್ಯ ಆರಂಭ ಮಾಡುವಾಗ ಎಚ್ಚರ ವಹಿಸಬೇಕು.
– ಮಕ್ಕಳ ಏಳಿಗೆ, ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಬೇಕು.

  • ವೃಷಭ ರಾಶಿ
    – ಅಶುಭ ಫಲ
    – 48 ದಿನ ಎಚ್ಚರ ವಹಿಸಬೇಕು.
    – ತಾಯಿ ಆರೋಗ್ಯ ವಿಚಾರವಾಗಿ ಎಚ್ಚರವಹಿಸಬೇಕು.
    – ವಿವಾಹಿತ ಸ್ತ್ರೀ ತವರು ಮನೆಯಿಂದ ಯಾವುದೇ ಕೆಟ್ಟ ಸನ್ನಿವೇಶ ಬಾರದಂತೆ ಎಚ್ಚರವಹಿಸಬೇಕು.
    – ವಿದ್ಯಾರ್ಥಿಗಳು ಹೆಚ್ಚು ಓದಬೇಕು.
    – ಭೂ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು.

ಪರಿಹಾರ
– ಚಂದ್ರಗ್ರಹಣ ಶಾಂತಿ ಮಾಡಿಸಬೇಕು.
– ಉರುಳಿ, ಭತ್ತ ದಾನ ಮಾಡಬೇಕು.

  • ಮಿಥುನ ರಾಶಿ
    – ಶುಭಫಲ.
    – ಸಹೋದರ ವಿಚಾರ ಕೆಟ್ಟಿದ್ದಲ್ಲಿ ಸರಿಯಾಗಬಹುದು.
    – ಪಿತೃರ್ಜಿತ ಆಸ್ತಿ ವಿಚಾರದಲ್ಲಿ ಒಳ್ಳೆಯದಾಗುವ ಸಾಧ್ಯತೆ.
    – ಪೊಲೀಸ್, ಆರ್ಮಿ, ರಾಜಕೀಯ ಕ್ಷೇತ್ರದವರಿಗೆ ಅದ್ಭುತ ಅವಕಾಶ.
  • ಕರ್ಕಾಟಕ ರಾಶಿ
    – ಮಿಶ್ರಫಲ.
    – ಹಣಕಾಸು ವಿಚಾರದಲ್ಲಿ ಎಚ್ಚರವಹಿಸಬೇಕು.
    – ಆರ್ಥಿಕತೆ ವಿಚಾರದಲ್ಲಿ 48 ದಿನ ಎಚ್ಚರ ವಹಿಸಬೇಕು.
    – ಕೌಟುಂಬಿಕ ಸಮಸ್ಯೆಗಳು ದೊಡ್ಡದಾಗದಂತೆ ಎಚ್ಚರವಹಿಸಬೇಕು.
    – ಆರೋಗ್ಯ, ಮಾನಸಿಕತೆ ವಿಚಾರದಲ್ಲಿ ಎಚ್ಚರ ವಹಿಸಬೇಕು.

ಪರಿಹಾರ.
– ಶಾಂತಿ ಹೋಮ ಮಾಡಿಸಿ.

  • ಸಿಂಹ ರಾಶಿ.
    – ಅಶುಭಫಲ.
    – ಕಳೆದುಕೊಳ್ಳುವಿಕೆ ಜಾಸ್ತಿ ಆಗಬಹುದು.
    – ಅಧಿಕಾರ, ಉದ್ಯೋಗ, ವಸ್ತುಗಳ ಕಳೆದುಕೊಳ್ಳಬಹುದು.
    – ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.
    – ಮಾನಸಿಕವಾಗಿ ಕುಗ್ಗಿಸುವ ಪರಿಸ್ಥಿತಿ ಬರಬಹುದು.
    – ದೂರ ಪ್ರಯಾಣ, ಒಬ್ಬರೆ ಪ್ರಯಾಣ 48 ದಿನ ಬೇಡ.

ಪರಿಹಾರ
– ಗ್ರಹಣ ಶಾಂತಿ.
– ಹುರುಳಿ, ಭತ್ತ ದಾನ ಮಾಡಿ.
– ಚಂದ್ರ ಬಿಂಬ ದಾನ ಮಾಡಿ.

  • ಕನ್ಯಾ ರಾಶಿ.
    – ಅಶುಭ ಫಲ.
    – ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ.
    – 48 ದಿನ ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಹಿಸಬೇಕು.
    – ನಷ್ಟದ ಸಾಧ್ಯತೆ ಇದೆ.
    – ಕಳೆದುಕೊಳ್ಳುವಿಕೆ ಸಾಧ್ಯತೆ ಇದೆ.
    – ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹೆಚ್ಚು.

ಪರಿಹಾರ.
– ನಿತ್ಯ 48 ದಿನ ವಿಷ್ಣುಸಹಸ್ರನಾಮ ಪಠಿಸಿ.
– ಮಹಾಚಂದ್ರಗ್ರಹಣ ಶಾಂತಿ ಹೋಮ ಮಾಡಿಸಿ.
– ಉರುಳಿ, ಭತ್ತ, ಚಂದ್ರ ಬಿಂಬ ದಾನ ಮಾಡಿ.

  • ತುಲಾ ರಾಶಿ.
    – ಶುಭಫಲ.
    – ಉದ್ಯೋಗದಲ್ಲಿ ಶುಭಸುದ್ದಿ ಸಾಧ್ಯತೆ.
    – ಹಿಂದಿನ ವ್ಯಾಪಾರ, ವ್ಯವಹಾರದಲ್ಲಿ ಲಾಭ ಸಾಧ್ಯತೆ.

ವೃಶ್ಚಿಕ ರಾಶಿ
– ಶುಭಫಲ.
– ಉದ್ಯೋಗದಲ್ಲಿ ಶುಭಫಲ.
– ನಿರುದ್ಯೋಗಿಗಳಿಗೂ ಶುಭ ಸುದ್ದಿ.
– ಪಿತ್ರಾರ್ಜಿತ ಆಸ್ತಿಯಲ್ಲಿ ಅನೂಕೂಲ ಸಾಧ್ಯತೆ.
– ತಂದೆ ಆರೋಗ್ಯ, ಸಂಬಂಧ ಸುಧಾರಣೆ ಆಗಲಿದೆ.
– ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸಮಯ.

  • ಧನು ರಾಶಿ
    – ಮಿಶ್ರ ಫಲ.
    – 48 ದಿನ ನಷ್ಟದ ಸಾಧ್ಯತೆ ಇದೆ.
    – ಪಿತ್ರಾರ್ಜಿತ ಆಸ್ತಿ, ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.
    – ಸ್ತ್ರಿಯರು ಯಜಮಾನರ ಆರೋಗ್ಯದಲ್ಲಿ ಗಮನಹರಿಸಬೇಕು.
    – ನಿಮ್ಮ ಮಾನಸಿಕ ಸ್ಥಿತಿ ಬಗ್ಗೆ ಗಮನ ಇರಲಿ.

ಪರಿಹಾರ
– ಗ್ರಹಣ ಶಾಂತಿ ಹೋಮ.
– ಉರುಳಿ, ಭತ್ತ ಅಥವಾ ಅಕ್ಕಿ ದಾನ.
– ಚಂದ್ರಬಿಂಬ ದಾನ.
– ಈಶ್ವರ ದೇವಾಲಯದಲ್ಲಿ ಹಾಲಿನಿಂದ ರುದ್ರಾಭಿಷೇಕ ಮಾಡಿಸಿ.

ಮಕರ ರಾಶಿ
– ಅಶುಭ ಫಲ.
– ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಸಮಸ್ಯೆಯಾಗಲಿದೆ.
– ಅಡತಡೆಸಾಧ್ಯತೆ.
– ವಿವಾಹಿತರಿಗೆ ಬಾಳಸಂಗಾಂತಿ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು.
– ವಿವಾಹಿತ ಸ್ತ್ರಿಯರು ಆರೋಗ್ಯದಲ್ಲಿ ಹೆಚ್ಚಿನ ಗಮನಹರಿಸಬೇಕು.
– ದೂರ ಪ್ರಯಾಣ ಬೇಡ. ಒಬ್ಬರೆ ಓಡಾಟ, ವಿದೇಶ ಪ್ರಯಾಣ ಬೇಡ.

ಪರಿಹಾರ
– ಈಶ್ವರ ಆರಾಧನೆ, ಕುಲದೇವರ ಆರಾಧನೆ ಮಾಡಿ.
– ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ
– ಪಂಚಾಕ್ಷರಿ ಜಪ ಮಾಡಿ.
– ಗ್ರಹಣ ಶಾಂತಿ ಹೋಮ, ಧಾನ ಮಾಡಿ.

ಕುಂಭರಾಶಿ
– ಮಿಶ್ರಾಫಲ.
– ಸಾಲ ವಿಚಾರದಲ್ಲಿ ಸಮಸ್ಯೆ ಸಾಧ್ಯತೆ.
– ಆರೋಗ್ಯ ಭಾದೆ.
– ಶತೃ ದೃಷ್ಟಿ ಸಮಸ್ಯೆ ಸಾಧ್ಯತೆ.

ಪರಿಹಾರ
– ಅಷ್ಟೋತ್ರ, ಗಣಪತಿ ಅಷ್ಟೋತ್ರ ಪಠಣೆ ಮಾಡಿ.
– ಗ್ರಹಣ ಶಾಂತಿ ಹೋಮ.
– ಚಂದ್ರ ಬಿಂಬ, ಹುರುಳಿ, ಭತ್ತ ದಾನ.

  • ಮೀನ ರಾಶಿ.
    – ಶುಭಫಲ
    – ಸಾಲದ ಸಮಸ್ಯೆ ಬಗೆಹರಿಯಬಹುದು.
    – ಶತೃಗಳು ಮಿತ್ರರಾಗುವ ಸಾಧ್ಯತೆ.
    – ದೃಷ್ಟಿ ದೋಷ ದಿನ ತಪ್ಪಿಸಿ ಕೊಳ್ಳ ಬಹುದು.
    – ಆರೋಗ್ಯ ಸುಧಾರಣೆ.

ಪರಿಹಾರ
– ಮನೆದೇವರ ದರ್ಶನ ಮಾಡಿ.
– ಭತ್ತ, ಉರುಳಿ ಚಂದ್ರಬಿಂಬ ದಾನ.































error: Content is protected !!
Scroll to Top