ಕಾರ್ಕಳ: ಯಾವುದೇ ಕ್ಷೇತ್ರದಲ್ಲಿ ಸಾಧನೆ ತೋರಲು ಒಂದಷ್ಟು ಸವಾಲು ಎದುರಾಗುವುದು ಸಹಜ. ಓರ್ವ ಮಹಿಳೆಯಾಗಿ ಶ್ವೇತಾ ಜೈನ್ ಅವರು ಸವಾಲುಗಳನ್ನು ಎದುರಿಸಿ, ತನ್ನ ಪರಿಶ್ರಮ, ಬದ್ಧತೆ, ನಾಯಕತ್ವದೊಂದಿಗೆ ಜೇಸಿಐ ಕಾರ್ಕಳ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಶ್ಲಾಘನೀಯ ಎಂದು ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹೇಳಿದರು.
ಅವರು ಫೆ. 1ರಂದು ಕಾರ್ಕಳ ವಿಜೇತಾ ಗಾರ್ಡನ್‌ನಲ್ಲಿ ಜೇಸಿಐ ಕಾರ್ಕಳಕ್ಕೆ 4 ರಾಷ್ಟ್ರೀಯ ಪ್ರಶಸ್ತಿ ಹಾಗೂ 11 ರಾಷ್ಟ್ರೀಯ ಮನ್ನಣೆ ದೊರೆತ ಹಿನ್ನೆಲೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.
ಜೇಸಿಐ ಕಾರ್ಕಳದ ಸದಸ್ಯರು, ಸಂಬಂಧಿಕರು, ಸ್ನೇಹಿತರೊಡಗೂಡಿ ನಡೆಸಿರುವ ಈ ಕೃತಜ್ಞತ ಸಭೆ ಭಾವನಾತ್ಮಕವಾದುದು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಸಭೆಯು ಪ್ರೇರಣೆಯಾಗಲಿದೆ ಎಂದರು.
ಉದ್ಯಮಿ ವಿಜಯ ಶೆಟ್ಟಿ, ಸವಿತಾ ವಿಜಯ ಶೆಟ್ಟಿ, ಜೇಸಿಐ ವಲಯ ಮಾಜಿ ಅಧ್ಯಕ್ಷರಾದ ಅಭಿಲಾಶ್, ಚಿತ್ತರಂಜನ್ ಶೆಟ್ಟಿ, ಜಾನ್ ಡಿಸಿಲ್ವಾ, ಕಾರ್ಕಳ ಜೇಸಿಐ ಪೂರ್ವಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ವೃಷಭರಾಜ್ ಕಡಂಬ, ಸಂತೋಷ್ ಜೈನ್ ರೆಂಜಾಳ, ವಿಖ್ಯಾತ್ ಶೆಟ್ಟಿ, ವಿಘ್ನೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಈ ಸಂದರ್ಭದಲ್ಲಿ ಶ್ವೇತಾ ಸಂತೋಷ್ ಜೈನ್ ದಂಪತಿಯನ್ನು ಜೇಸಿಐ ಕಾರ್ಕಳ ವತಿಯಿಂದ ಸನ್ಮಾನಿಸಲಾಯಿತು.
ಮಜಾ ಟಾಕೀಸ್ ಖ್ಯಾತಿಯ ಮೋಹನ್ ಬಳಗದವರಿಂದ ಸಂಗೀತ ರಸಮಂಜರಿ ಜರುಗಿತು.

























































































