ಛಾಯಾಗ್ರಾಹಕ ದತ್ತಾತ್ರೇಯರಿಗೆ ಅಭಿನಂದನೆ

ಕಾರ್ಕಳ : ಚೇತನಾ ವಿಶೇಷ ಶಾಲೆಯ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ, ಶ್ರೀದೇವಿ ಆರ್ಟ್ಸ್ ಮಾಲಕ ದತ್ತಾತ್ರೇಯ ಅವರನ್ನು ಅಭಿನಂದಿಸಲಾಯಿತು.
ಛಾಯಾಗ್ರಹಣ, ಕರಾಟೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ಷೇತ್ರದ ಕಾರ್ಯವೈಖರಿ ಮತ್ತು ಚೇತನ ವಿಶೇಷ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ದತ್ತಾತ್ರೇಯ ಅವರು ಪ್ರಸ್ತುತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಚೇತನಾ ವಿಶೇಷ ಶಾಲಾ ಅಧ್ಯಕ್ಷ ಗಣಪತಿ ಪೈ, ಕೋಶಾಧಿಕಾರಿ ವಿಜಯ್‌, ನಿವೃತ್ತ ಪ್ರಾಂಶುಪಾಲ ಗೋವಿಂದ ಪ್ರಭು, ಉದ್ಯಮಿ ಸವರಿನ್‌ ಸುರೇಶ್‌ ಶೆಣೈ, ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ರಾವ್‌, ಎಸ್‌ಕೆಪಿಎ ಕಾರ್ಕಳ ವಲಯ ಅಧ್ಯಕ್ಷ ಪ್ರಮೋದ್‌ಚಂದ್ರ ಪೈ ಮುನಿಯಾಲು, ಮಾಜಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಮುಖ್ಯ ಶಿಕ್ಷಕಿ ಹೇಮಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಧ್ಯಾ ನೆಲ್ಲಿಕಾರು ಕಾರ್ಯಕ್ರಮ ನಿರ್ವಹಿಸಿದರು.

















































error: Content is protected !!
Scroll to Top