ಕಾರ್ಕಳ : ಚಲಿಸುತ್ತಿದ್ದ ಬಸ್‌ನಿಂದ ಮಹಿಳೆಯೋರ್ವರು ರಸ್ತೆಗೆಸೆಯಲ್ಪಟ್ಟ ಘಟನೆ ಮಿಯ್ಯಾರು ಬಳಿ ಜ. 26ರ ಸಂಜೆ ಸಂಭವಿಸಿದೆ. ಉಡುಪಿಯಿಂದ ಬೆಳ್ತಂಗಡಿ ಸಾಗುತ್ತಿದ್ದ ವರುಣ್ (ಪ್ರೈಸ್ ದಿ ಲಾರ್ಡ್) ಬಸ್ ಮಿಯ್ಯಾರು ಡಿವೈಡರ್ ಬಳಿ ಸಮೀಪಿಸುತ್ತಿದ್ದಂತೆ ಬಸ್‌ನ ಬಾಗಿಲು ಬಳಿಯಿದ್ದ ಮಿಯ್ಯಾರು ಗ್ರಾಮದ ಜಯಂತಿ (63) ಎಂಬವರು ಹೊರಗೆಸೆಯಲ್ಪಟ್ಟು ಅದೇ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿದ್ದರು. ಪರಿಣಾಮ ಜಯಂತಿ ಅವರ ಬಲಕೈ ಸಂಪೂರ್ಣ ನಜ್ಜುಗುಜ್ಜಾಗಿದೆ. ತಕ್ಷಣವೇ ಸಾಮಾಜಿಕ ಕಾರ್ಯಕರ್ತ ರಾಮಕಾಂತ್ ಶೆಟ್ಟಿ ಕರಿಮಾರುಕಟ್ಟೆ ಅವರು ತನ್ನ ಕಾರಿನಲ್ಲಿ ಜಯಂತಿ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜ. 22ರಂದು ಇದೇ ಸಂಸ್ಥೆಯ (ವರುಣ್) ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ನಾಲ್ಕು ಜೀವ ಬಲಿಯಾಗಿದ್ದು ಈ ದುರಂತ ಮಾಸುವ ಮುನ್ನವೇ ಮಿಯ್ಯಾರಿನಲ್ಲಿ ಮತ್ತೆ ಅಪಘಾತ ಸಂಭವಿಸಿದ್ದು ಜನ ಭಯಭೀತಗೊಳ್ಳುವಂತಾಗಿದೆ









