ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದಲ್ಲಿ ಜ.25ರಂದು ವಾರ್ಷಿಕ ಮಹೋತ್ಸವ ಪ್ರಾರಂಭಗೊಂಡಿದ್ದು ನಿನ್ನೆ ಬೆಳಗ್ಗೆ 8 ಗಂಟೆಗೆ ಪ್ರಥಮ ಪವಿತ್ರ ಬಲಿಪೂಜೆ ನಡೆಯುವ ಮೂಲಕ ಎರಡನೇ ದಿನದ ಸಂಭ್ರಮ ಅದ್ದೂರಿಯಾಗಿ ಪ್ರಾರಂಭವಾಯಿತು. ಬೆಳ್ಮಣ್ ಧರ್ಮಕೇಂದ್ರದ ಸಹಾಯಕ ಫಾದರ್ ಓಸ್ವಾಲ್ಡ್ ವಾಜ್ ಬಲಿಪೂಜೆ ನಡೆಸಿದರು.
ದಿನದ ಮಹೋತ್ಸವದ ಪ್ರಮುಖ ಆಡಂಭರದ ಬಲಿಪೂಜೆ ಸಂಜೆ 5 ಗಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಡುಮಿಂಗ್ ಡಯಾಸ್ ಅವರು ಕನ್ನಡದಲ್ಲಿ ನೆರವೇರಿಸಿದರು.
ಅವರು ತಮ್ಮ ಪ್ರವಚನದಲ್ಲಿ ʼದಿಲೆಕ್ಸಿತ್ ತೆ – ನಾನು ನಿನ್ನನ್ನು ಪ್ರೀತಿಸಿದ್ದೇನೆʼ ಎಂಬ ವಿಷಯದ ಕುರಿತು ಭೋದನೆ ಮಾಡಿದರು. ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತದ ವಿವಿಧ ಧರ್ಮಕೇಂದ್ರಗಳಿಂದ ಬಂದ ಗಾಯನ ಮಂಡಳಿಗಳು ತಮ್ಮ ಭಕ್ತಿಯ ಗಾಯನ ಸಂಗೀತದಿಂದ ಬಲಿಪೂಜೆಯ ಮೆರುಗನ್ನು ಹೆಚ್ಚಿಸಿದರು. ವಂ. ಗುರು ವಿಲ್ಸನ್ ಡಿ’ಸೋಜಾ ಮತ್ತು ವಂ. ಗುರು ಪ್ರದೀಪ್ ಕಾರ್ಡೋಜಾ ಅವರು ಬಲಿಪೂಜೆಗೆ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು.

ಎಂಎಲ್‌ಸಿ ಶ್ರೀ ಐವಾನ್ ಡಿ’ಸೋಜಾ, ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ, ನಾರಾಯಣ ಗುರು ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ಉದ್ಯಮಿ ಫಿಲಿಪ್ ಡಿ’ಕೋಸ್ತಾ, ಮೊದಲಾದವರು ಬಸಿಲಿಕಾಕ್ಕೆ ಭೇಟಿ ನೀಡಿದರು.

ಮಹೋತ್ಸವದ ಇತರ ಬಲಿಪೂಜೆಗಳನ್ನು ಗುರು ಅನಿಲ್ ಡಿಸೋಜ (ಪಕ್ಷಿಕರೆ ಧರ್ಮಕೇಂದ್ರ), ಗುರು ಸಿರಿಲ್ ಲೋಬೊ (ದಿವ್ಯ ಧಾಮ ಗುರುಮಠ, ಮೂಡುಬೆಳ್ಳೆ), ಗುರು ಜಾನ್ ಫ್ರಾನ್ಸಿಸ್ ಸಿಕ್ವೆರಾ (ಕಾರ್ಮೆಲ್ ಸಭೆ), ಗುರು ಅಸ್ಸಿಸ್ಸಿ ಫ್ರಾನ್ಸಿಸ್ ಡಿ’ಅಲ್ಮೆಡಾ (ಕಾರ್ಯದರ್ಶಿ ಕೆಆರ್‌ಸಿಇ, ಬೆಂಗಳೂರು), ಗುರು ಜೋಸಫ್ ಮಾರ್ಟಿಸ್ (ದೆರೆಬೈಲ್ ಧರ್ಮಕೇಂದ್ರ), ಗುರು ಡೆನಿಸ್ ಡೆಸಾ (ತೊಟ್ಟಂ ಧರ್ಮಕೇಂದ್ರ), ಗುರು ವಿಜಯ್ ಡಿಸೋಜ (ಪ್ರಾಶುಂಪಾಲರು, ಸಂತ ಮೇರಿ ಅಃSಅ ಶಾಲೆ ಉಡುಪಿ), ಮತ್ತು ಗುರು ಜಾನ್ಸನ್ ಸಿಕ್ವೇರಾ (ಪ್ರಾಂಶುಪಾಲರು ಲೂರ್ಡ್ಸ್ ಸಿಬಿಎಸ್‌ಇ ಶಾಲೆ, ಬಿಜಾಯ್) ಇವರೆಲ್ಲರು ನೆರವೇರಿಸಿದರು. ಬಸಿಲಿಕಾದ ರೆಕ್ಟರ್ ಗುರು ಆಲ್ಬನ್ ಡಿಸೋಜ ಮತ್ತು ಸಹಾಯಕ ಗುರು ರೋಬಿನ್ ಸಾಂತುಮಾಯೆರ್ ಮೇಲ್ವಿಚಾರಣೆ ನಡೆಸಿದರು. ಬಸಿಲಕಾ ಧರ್ಮಕೇಂದ್ರದ ಉಪಾಧ್ಯಕ್ಷ ಸಂತೋಷ್ ಡಿ’ಸಿಲ್ವಾ, ಕಾರ್ಯದರ್ಶಿ ರೋನಾಲ್ಡ್ ನೊರೋನ್ಹಾ ಮತ್ತು ನಿಯೋಜಿತ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ವಂದಿಷ್ ಮಾಥಾಯಸ್ ಮತ್ತು ಮೇಲ್ವಿನ್ ಕ್ಯಾಸ್ಟೆಲಿನೊ ಸಹಕರಿಸಿದರು.









