ಜೇಸಿಐ ಕಾರ್ಕಳಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿ

ಚೆನ್ನೈ : ಚೆನ್ನೈಯಲ್ಲಿ ನಡೆದ ಜೇಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ಕಾರ್ಕಳವು ಹಲವಾರು ಪ್ರಶಸ್ತಿಗೆ ಭಾಜನವಾಗಿದೆ. ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್‌ ಅವರಿಗೆ ಔಟ್‌ಸ್ಟ್ಯಾಂಡಿಗ್‌ ಸ್ಪೋರ್ಟ್ಸ್‌ ಡೆವಲಪ್ಮೆಂಟ್ ಪ್ರೋಗ್ರಾಮ್‌ ಪ್ರಶಸ್ತಿ, ಜೇಸಿಐ ಕಾರ್ಕಳ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವಂದನಾ ರೈ ಅವರಿಗೆ ಡಿಜಿಟಲ್‌ ಇನ್ಫ್ಲುಯೆನ್ಸರ್ ಆವಾರ್ಡ್, ವರ್ಧಮಾನ್‌ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕರ್ತವ್ಯ ಜೈನ್‌ ಅವರಿಗೆ ರಾಷ್ಟ್ರೀಯ‌ ಮಟ್ಟದ ಎಫೆಕ್ಟಿವ್‌ ಪಬ್ಲಿಕ್‌ ಸ್ಪೀಕಿಂಗ್‌ ಪ್ರಶಸ್ತಿ ಲಭಿಸಿದೆ. ಜೇಸಿಐ ಕಾರ್ಕಳಕ್ಕೆ ಒಟ್ಟು 10 ಮನ್ನಣೆಗೆ ಪಾತ್ರವಾಗಿದ್ದು, ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಅಂಕುರ್‌ ಜುಂಝೂನವಾಲ ಪ್ರಶಸ್ತಿ ಹಸ್ತಾಂತರಿಸಿದರು. ಜೇಸಿಐ ವಲಯ 15ರ ಅಧ್ಯಕ್ಷ ಅಭಿಷೇಕ್‌ ಬಿ.ಎ., ಜೇಸಿಐ ಕಾರ್ಕಳದ ಪೂರ್ವ ಅಧ್ಯಕ್ಷ ವಿಘ್ನೇಶ್‌ ಪ್ರಸಾದ್, ಸಾಹಿನಾ ರಿಜ್ವಾನ್‌ ಖಾನ್‌ ಮತ್ತಿತರರು ಈ ಸಂದರ್ಭದಲ್ಲಿದ್ದರು.

ರಾಷ್ಟ್ರೀಯ ಅಧ್ಯಕ್ಷರಿಂದ ವಂದನಾ ರೈ ಪ್ರಶಸ್ತಿ ಸ್ವೀಕಾರ

52 ವರ್ಷದ ಇತಿಹಾಸ ಹೊಂದಿರುವ ಜೇಸಿಐ ಕಾರ್ಕಳವು ಶ್ವೇತಾ ಎಸ್.‌ ಜೈನ್‌ ಅವರ ಸಾರಥ್ಯದಲ್ಲಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಾಗಾರ, ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿತ್ತು. ಶಾಶ್ವತ ಯೋಜನೆಯೊಂದಿಗೆ ಕ್ರೀಡೆ, ಕಲೆಗೆ ಪ್ರೋತ್ಸಾಹ ನೀಡಿ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು.

ಕರ್ತವ್ಯ ಜೈನ್‌ ಪ್ರಶಸ್ತಿ ಸ್ವೀಕಾರ



























































































































error: Content is protected !!
Scroll to Top