ಯಡಿಯೂರಪ್ಪನವರ ಹೆಸರು ಹಾಳಾಗಲು ಪುತ್ರನೇ ಕಾರಣ

ಬೆಳಗಾವಿ : ಯಡಿಯೂರಪ್ಪನವರ ಹೆಸರು ಹಾಳಾಗಲು ಪುತ್ರನೇ ಕಾರಣ. ಕಲೆಕ್ಷನ್‌ ಕಿಂಗ್‌ ಅಂದ್ರೆ ಅದು ವಿಜಯೇಂದ್ರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುತರ ಆರೋಪವನ್ನು ಮಾಡಿದ್ದಾರೆ.
ಅವರು ರಾಜ್ಯದ ಖಜಾನೆ ಲೂಟಿ ಮಾಡಿ ಕಾಂಗ್ರೆಸ್‌ ತನ್ನ ಹೈಕಮಾಂಡ್‌ ತೃಪ್ತಿ ಪಡಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದರು.

ಅವರು ತಮ್ಮ ಇತಿಮಿತಿಯಲ್ಲಿ ಇದ್ದರೆ ಅವರಿಗೆ ಒಳ್ಳೆಯದು. ಇಲ್ಲದಿದ್ದರೆ, ಸದನದಲ್ಲಿ ಎಲ್ಲವನ್ನೂ ಬಿಚ್ಚಿಡ ಬೇಕಾಗುತ್ತದೆ ಎಂದ ಡಿ. ಕೆ. ಶಿವಕುಮಾರ್‌ ವಿಜಯೇಂದ್ರನಿಗೆ ಅನುಭವ ಇಲ್ಲ, ಯಾವ ಖಜಾನೆ ಖಾಲಿಯಾಗಿದೆ ಬಂದು ಮಾತನಾಡೋಕೆ ಹೇಳಿ ತಪ್ಪಿಸಿಕೊಂಡು ಮಾತನಾಡೋದಲ್ಲಾ. ಸದನಕ್ಕೆ ಬಂದು ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು.

ಇನ್ನೂ ಉತ್ತರ ಕರ್ನಾಟಕ ಚರ್ಚೆ ಕುರಿತು ಮಾತನಾಡಿದ ಅವರು, ಸಿಎಂ ಮತ್ತು ಕಂದಾಯ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿ ಪ್ರಶ್ನೆಗೆ ಉತ್ತರ ನೀಡತ್ತಾರೆ. ಮಹದಾಯಿ ನೀರಾವರಿ ಅಭಿವೃದ್ಧಿ ಬಗ್ಗೆ ನಾನು ಸಹ ಉತ್ತರ ನೀಡುತ್ತೇನೆ. ಕಬ್ಬು, ಮೆಕ್ಕೆಜೋಳಕ್ಕೆ ಬೆಂಬಲ ನೀಡಿದ್ದೆವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತು ಕಬ್ಬು ಕಾರ್ಖಾನೆಗಳಿಗೆ ಸಾಕಷ್ಟು ಹೊರೆಯಾಗಿದೆ. ಇದನ್ನು ರಾಜ್ಯದ ರೈತರು ಅರ್ಥ ಮಾಡಿಕೊಳ್ಳಬೇಕು, ನಿಮ್ಮ ಪರವಾಗಿ ರಾಜ್ಯ ಸರ್ಕಾರವಿದೆ ಎಂದು ಹೇಳಿದರು.









































error: Content is protected !!
Scroll to Top