ಮುಂದುವರಿದ ಇಂಡಿಗೋ ಸಮಸ್ಯೆ – ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು

ದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರೆದಿದೆ. ಡಿ.8ರಂದು ಬೆಂಗಳೂರಿನಲ್ಲಿ 127 ಸೇರಿದಂತೆ ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ಹಾಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಡಿ.8ರ ಬೆಳಿಗ್ಗೆ 10:30ರ ವೇಳೆಗೆ ದೇಶಾದ್ಯಂತ 456 ವಿಮಾನಗಳ ಹಾರಾಟ ರದ್ದಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನಿರ್ಗಮನ ಹಾಗೂ ಆಗಮನ ಸೇರಿ ಒಟ್ಟು 134 ವಿಮಾನಗಳು, ಬೆಂಗಳೂರಿನಲ್ಲಿ 127, ಚೆನ್ನೈನಲ್ಲಿ 71, ಹೈದರಾಬಾದ್‌ನಲ್ಲಿ 77, ಜಮ್ಮುವಿನಲ್ಲಿ 20, ಅಹಮದಾಬಾದ್‌ನಲ್ಲಿ 20 ಮತ್ತು ವೈಜಾಗ್‌ನಲ್ಲಿ 7, ಮುಂಬೈ, ಕೋಲ್ಕತ್ತಾ ಸೇರಿದಂತೆ ಇತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಬೆಂಗಳೂರಿನಿಂದ ದೆಹಲಿ, ಲಕ್ನೋ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ, ಅಮೃತಸರ್‌ಗೆ ಸಂಚರಿಸಬೇಕಿದ್ದ ವಿಮಾನಗಳು ಕ್ಯಾನ್ಸಲ್ ಆಗಿದ್ದು, ವಿಮಾನಗಳ ರದ್ಧತಿ ಬಗ್ಗೆ ಇಂಡಿಗೋ 5 ಗಂಟೆ ಮುಂಚಿತವಾಗಿ ಮಾಹಿತಿ ನೀಡಿದ ಹಿನ್ನೆಲೆ ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಂದಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ, ಈಗಾಗಲೇ ಇಂಡಿಗೋ ತೊಂದರೆಗೊಳಗಾದ ಪ್ರಯಾಣಿಕರಿಗೆ 610 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಟಿಕೆಟ್‌ಗಳ ಹಣವನ್ನು ಮರುಪಾವತಿಸಿದೆ.

ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನಲೆ, ವಿಮಾನ ಟಿಕೆಟ್ ದರ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ಏರ್ ಆಂಬ್ಯುಲೆನ್ಸ್‌ಗಳ ದರವೂ ಏರಿಕೆಯಾಗಿದೆ. ಇದರ ಮೂಲಕ ರೋಗಿಗಳನ್ನು ಶಿಫ್ಟ್ ಮಾಡೋಕು ಸಮಸ್ಯೆಯಾಗ್ತಿದೆ. ದರ ಏರಿಕೆಯ ನಡುವೆಯೂ ಸಕಾಲಕ್ಕೆ ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ರೋಗಿಗಳು ಪರದಾಡುವಂತಾಗಿದೆ.









































































































error: Content is protected !!
Scroll to Top