ಆಗುಂಬೆ ಘಾಟಿಯಲ್ಲಿ ಕಾರಿಗೆ ಪಿಕಪ್‌ ಡಿಕ್ಕಿ – ಮೂವರಿಗೆ ಗಾಯ

ಕಾರ್ಕಳ : ಆಗುಂಬೆ ಘಾಟಿಯಲ್ಲಿ ಕಾರಿಗೆ ಪಿಕಪ್‌ ವಾಹನ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಡಿ. 7ರಂದು ನಡದಿದೆ. ತುಮಕೂರಿನ ತುರುವೇಕರೆಯ ವರುಣ ಪ್ರಸಾದ್‌ ಬಿ.ಪಿ. ಎಂಬವರು ತನ್ನ ಕುಟುಂಬಸ್ಥರೊಂದಿಗೆ ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ತುರುವೇಕರೆ ಹೋಗುವುದಕ್ಕಾಗಿ ತನ್ನ ಸಂಬಂಧಿಯ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಸಾಗುತ್ತಿದ್ದಾಗ ನಾಡ್ಪಾಲು ಗ್ರಾಮದ ಆಗುಂಬೆ ಘಾಟಿ 3ನೇ ತಿರುವಿನಲ್ಲಿ ತಲುಪುವಾಗ ಆಗುಂಬೆ ಕಡೆಯಿಂದ ಬರುತ್ತಿದ್ದ ಪಿಕಪ್‌ ವಾಹನವನ್ನು ಅದರ ಚಾಲಕ ಯಾಸಿನ್‌ ಓವರ್‌ ಟೇಕ್‌ ಮಾಡುವ ಭರದಲ್ಲಿ ತನ್ನ ಮುಂದುಗಡೆ ಹೋಗುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಪಿಕಪ್‌ ವಾಹನ ಹಿಂಭಾಗ ತಿರುಗಿ ವರುಣ ಪ್ರಸಾದ್‌ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ವರುಣ ಪ್ರಸಾದ್‌, ರಶ್ಮಿ, ಜ್ಯೋತಿ ಹಾಗೂ ರೀಧಿಕಾ ಅವರು ಗಾಯಗೊಂಡಿದ್ದು, ಹೆಬ್ರಿ ಹೆಲ್ತ್‌ ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top