ಕಾರ್ಕಳ : ಸಿಡಿಲು ಬಡಿದು ತೋಟದಲ್ಲಿದ್ದ ಎರಡು ದನ ಸಾವನಪ್ಪಿದ ದುರ್ಘಟನೆ ಅ.18ರಂದು ಮಿಯ್ಯಾರು ಗ್ರಾಮದ ಜೋಡುಕಟ್ಟೆಯ ಕಾರೋಲ್ ಗುಡ್ಡೆಯಲ್ಲಿ ಸಂಭವಿಸಿದೆ.
ಸಂಜೆ 4 ಗಂಟೆಯ ವೇಳೆ ಬಂದ ಗುಡುಗು ಸಿಡಿಲಿಗೆ ಕಾರೋಲ್ ಗುಡ್ಡೆಯ ಮೆಲ್ವಿನ್ ಮೆಂಡೊನ್ಸ ಎಂಬವರ ತೋಟದಲ್ಲಿದ್ದ ದನಗಳು ಸಾವಿಗೀಡಾಗಿದೆ. ಅಲ್ಲದೆ ಸಿಡಿಲಿಗೆ ಮೆಲ್ವಿನ್ ಮೆಂಡೊನ್ಸ ಮತ್ತು ಅವರ 4 ವರ್ಷದ ಮಗು ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.


























