ಕರಾವಳಿಯ ಪ್ರತಿಷ್ಠಿತ ಸಂಸ್ಥೆ ಎಂಸಿಎಫ್ ಹೆಸರು ಬದಲಾವಣೆ

ಮಂಗಳೂರು : ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿ ಲೈಸರ್ಸ್ (ಎಂಸಿಎಫ್) ಇನ್ನು ಮುಂದೆ ಪಾರಾದೀಪ್ ಫಾಸ್ಪೇಟ್ಸ್ ಲಿ. ಕರೆಸಿಕೊಳ್ಳಲಿದೆ. ಎಂಸಿಎಫ್ ಮತ್ತು ಪಾರಾದೀಪ್ ಫಾಸ್ಟೇಟ್ಸ್ ಕಂಪೆನಿಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅ. 16ರಂದು ಹೆಸರು ಬದಲಾವಣೆಯಾಗಿದೆ. ಅ. 31ರಿಂದ ಅಧಿಕೃತ ಹೊಸ ಬೋರ್ಡ್‌ನೊಂದಿಗೆ ಕಾರ್ಯಾರಂಭ ಮಾಡಲಿದೆ.

ಎಂಸಿಎಫ್
1966ರಲ್ಲಿ ದುಗ್ಗಲ್ ಎಂಟ‌ರ್ಪ್ರೈಸಸ್ ಮಲಬಾರ್ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ ಪ್ರೈ.ಲಿ. ಹೆಸರಿನಲ್ಲಿ ಯೋಜನೆ ಆರಂಭ ಮಾಡಿತ್ತು. 1969ರಲ್ಲಿ ಕರ್ನಾಟಕ ಸರಕಾರ ಒಡೆತನಕ್ಕೆ ಬಂತು. 1971ರಲ್ಲಿ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ ಆಗಿ ಬದಲಾಯಿತು. 1972ರ ಅ. 15ರಂದು ದೇವರಾಜ್ ಅರಸು ಅಡಿಗಲ್ಲು ಹಾಕಿದ್ದು, 1974ರಲ್ಲಿ ಕಾರ್ಯಾರಂಭಗೊಂಡಿತು. 1990ರಲ್ಲಿ ಕರ್ನಾಟಕ ಸರ್ಕಾರವು MCF ನಿರ್ವಹಣೆಯನ್ನು UB ಗ್ರೂಪ್‌ಗೆ ಹಸ್ತಾಂತರಿಸಿತು. ನಂತರ ಅಡ್ವೆಂಟ್ಜ್‌ ಗ್ರೂಪ್ ನಿರ್ವಹಣೆಯನ್ನು ವಹಿಸಿಕೊಂಡಿತು.

ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ರೈಲ್ವೆ ಸಂಪರ್ಕ ಹೊಂದಿದ ಕಾರ್ಖಾನೆ ಇದಾಗಿದ್ದು, ಪ್ರಾರಂಭದಲ್ಲಿ ಸಾರ್ವಜನಿಕ ಉದ್ದಿಮೆಯಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ದೊಡ್ಡ ರಸಗೊಬ್ಬರ ಕಾರ್ಖಾನೆಯಾಗಿ ಆರಂಭಗೊಂಡಿತು. ಕಂಪೆನಿಯು ಯೂರಿಯಾ, ಡೈಅಮೋನಿಯಂ ಫಾಸ್ಪೇಟ್, ಹರಳಾಗಿಸಿದ ರಸಗೊಬ್ಬರಗಳು, ದ್ರವಗೊಬ್ಬರಗಳು, ಮಣ್ಣಿನ ಕಂಡಿಷನರ್‌ಗಳು, ಮ್ಯೂರಿಯೇಟ್ ಆಫ್ ಪೊಟ್ಯಾಶ್, ಮಣ್ಣಿನ ಸೂಕ್ಷ್ಮ ಪೋಷಕಾಂಶಗಳು, ವಿಶೇಷ ರಸ ಗೊಬ್ಬರಗಳು, ಆಹಾರ ದರ್ಜೆಯ ಅಮೋನಿಯಂ ಬೈಕಾರ್ಬನೇಟ್, ಕೈಗಾರಿಕಾ ರಾಸಾಯನಿಕಗಳಾದ ಸಲ್‌ಪ್ಯೂರಿಕ್ ಆಮ್ಲ ಮತ್ತು ಸಲ್ಫೋನೇಟೆಡ್ ಹರಳಾಗಿಸಿದ ರಸಗೊಬ್ಬರಗಳೊಂದಿಗೆ ವ್ಯವಹಾರ ನಡೆಸುತ್ತಾ ಬಂದಿದೆ.

















































error: Content is protected !!
Scroll to Top