ಫೇಸ್‌ಬುಕ್‌ನಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್‌ – ಪ್ರಕರಣ ದಾಖಲು

ಕಾರ್ಕಳ : ಫೇಸ್‌ಬುಕ್‌ನಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್‌ ಹಾಕಿರುವ ಕುರಿತಾಗಿ ವಿಜಯ ವಿಜಿ ಎಂಬವರ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಪಾದಿತೆ ವಿಜಯ ವಿಜಿ ಅವರು ಸೆ. 30ರಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಖಾತೆಯಲ್ಲಿ ʼಉಪ್ಪು ತಿಂದ ಮೇಲೆ ನೀರು ಕುಡಿಯಲೆ ಬೇಕು ಅಲ್ವಾ 420 ವಿರೇಂದ್ರ ಜೈನ್ ಅತ್ಯಾಚಾರ ಕೊಲೆ ಮಾಡಿದ ನಿನಗೆ ಶಿಕ್ಷೆ ಆಗ್ಲೇ ಬೇಕಲ್ವಾ, ಸೌಜನ್ಯಳೂ ಸೇರಿ ಧರ್ಮಸ್ಥಳದಲ್ಲಿ ಸತ್ತವರು ಹಿಂದೂಗಳು ಕಣ್ರಪ್ಪ… ಅವರನ್ನು ಬರ್ಬರವಾಗಿ ಕೊಂದ ಆರೋಪ ಹೊತ್ತವರು ಜೈನ ಅಲ್ಪಸಂಖ್ಯಾತರುʼ ಎಂದು ಪೋಸ್ಟ್ ಹಾಕಿದ್ದರು. ಜೈನ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಹಾಗೂ ಬೇರೆ ಧರ್ಮದವರೊಂದಿಗೆ ವೈಮನಸ್ಸು ಹಾಗೂ ಕೋಮು ಭಾವನೆ ಕೆರಳಿಸುವ ಉದ್ದೇಶದಿಂದ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.





















error: Content is protected !!
Scroll to Top