ಕಾರ್ಕಳ : ನಗದು ಸಹಿತ 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿ ಸಂಭವಿಸಿದೆ. ಸಾತುರ್ನಿನ್ ಮತಾಯಸ್ ಅವರು ಸೆ. 15ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಉತ್ತರ ಭಾರತದ ಲೇಹ್‌ಗೆ ಹೋಗಿದ್ದು, ಅವರ ಪತ್ನಿ ಕಾರ್ಕಳದ ಬಂಗ್ಲೆಗುಡ್ಡೆಯ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಅ. 1ರಂದು ಮಧ್ಯಾಹ್ನ ವಾಪಾಸು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಯಾರೋ ಕಳ್ಳರು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಬೆಡ್‌ರೂಮ್‌ನಲ್ಲಿ ಕಬ್ಬಿಣದ ಕಪಾಟನ್ನು ಪಿಕ್ಕಾಸಿನಿಂದ ಒಡೆದು ಕಪಾಟಿನಲ್ಲಿದ್ದ 1,50,000 ರೂ. ಹಣ, 24 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್, 12 ಗ್ರಾಮ್ ತೂಕದ 2 ಚಿನ್ನದ ಬಳೆಗಳು, 25 ಗ್ರಾಮ್ ತೂಕದ ಚಿನ್ನದ ಚೈನ್– 2, 12 ಗ್ರಾಮ್ ತೂಕದ ಚಿನ್ನದ 2 ಜೊತೆ ಕಿವಿಯ ರಿಂಗ್, ವಜ್ರದ ಪೆಂಟೆಂಡ್ ಇರುವ 1,25000 ರೂ. ಮೌಲ್ಯದ ಚಿನ್ನದ ಚೈನ್, ಒಂದು ಮುತ್ತಿನ ಹಾರ, ಅಮೇರಿಕನ್ ಡಾಲರ್ಸ್ ಅಂದಾಜು ಮೌಲ್ಯ-1000, ಬ್ರಿಟೀಷ್ ಪೌಂಡ್ಸ್ ಅಂದಾಜು ಮೌಲ್ಯ 500 ಆಗಿದ್ದು, ಒಟ್ಟು 6,50,000 ರೂ. ಮೌಲ್ಯದ ಸ್ವತ್ತು ಕಳವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಗದು ಸಹಿತ 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು









