ಕಾರ್ಕಳ 57,740 – ಹೆಬ್ರಿ 12,939 ಕುಟುಂಬಗಳ ಸಮೀಕ್ಷೆ ಪೂರ್ಣ – ಸ್ವಯಂ ಸಮೀಕ್ಷಾ ಕಾರ್ಯಕ್ಕೂ ಅವಕಾಶ

ಮೂರೇ ದಿನದಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ ಮಲ್ಲೇಶ್‌ಗೆ ಅಭಿನಂದನೆ

ಉಡುಪಿ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು 3. 55 ಲಕ್ಷ ಮನೆಗಳಿಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಮಾಡುವ ಸಂಬಂಧ ಈಗಾಗಲೇ ಮೆಸ್ಕಾಂ ಇಲಾಖೆ ವತಿಯಿಂದ ಜಿಯೋ ಟ್ಯಾಗ್ ಸ್ಟಿಕರ್ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಉಡುಪಿ ತಾಲೂಕಿನಲ್ಲಿ 97,918 ಕುಟುಂಬಗಳು, 844 ಬ್ಲಾಕ್‌ಗಳು, 7,497 ಮನೆಗಳ ಸಮೀಕ್ಷೆ, ಕುಂದಾಪುರ ತಾಲೂಕಿನಲ್ಲಿ 65,791 ಕುಟುಂಬಗಳು, 621 ಬ್ಲಾಕ್‌ಗಳು, 15,341 ಮನೆಗಳ ಸಮೀಕ್ಷೆ, ಕಾರ್ಕಳ ತಾಲೂಕಿನಲ್ಲಿ 57,740 ಕುಟುಂಬಗಳು, 531 ಬ್ಲಾಕ್‌ಗಳು, 12,612 ಮನೆಗಳ ಸಮೀಕ್ಷೆ, ಕಾಪು ತಾಲೂಕಿನಲ್ಲಿ 43,834 ಕುಟುಂಬಗಳು, 403 ಬ್ಲಾಕ್‌ಗಳು, 6,519 ಮನೆಗಳ ಸಮೀಕ್ಷೆ, ಹೆಬ್ರಿ ತಾಲೂಕಿನಲ್ಲಿ 12,939 ಕುಟುಂಬಗಳು, 121 ಬ್ಲಾಕ್‌ಗಳು, 4703 ಮನೆಗಳ ಸಮೀಕ್ಷೆ, ಬ್ರಹ್ಮಾವರ ತಾಲೂಕಿನಲ್ಲಿ 51,139 ಕುಟುಂಬಗಳು, 465 ಬ್ಲಾಕ್‌ಗಳು, 15,513 ಮನೆಗಳ ಸಮೀಕ್ಷೆ ಹಾಗೂ ಬೈಂದೂರು ತಾಲೂಕಿನಲ್ಲಿ 26,410 ಕುಟುಂಬಗಳು, 246 ಬ್ಲಾಕ್‌ಗಳು, 8,786 ಮನೆಗಳ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 70,971 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುತ್ತದೆ. ಸಮೀಕ್ಷಾ ಕಾರ್ಯಕ್ಕಾಗಿ 3,158 ಗಣತಿದಾರರನ್ನು ನೇಮಿಸಲಾಗಿದೆ ಎಂದು ಡಿಸಿ ತಿಳಿಸಿದರು.

3 ದಿನದಲ್ಲಿ ಪೂರ್ಣ
ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ಮಲ್ಲೇಶ್ ಅವರು ತಮಗೆ ವಹಿಸಿದ್ದ ಸಮೀಕ್ಷಾ ಕರ್ತವ್ಯವನ್ನು ಕೇವಲ ಮೂರು ದಿನಗಳ ಒಳಗಾಗಿ ಪೂರ್ಣಗೊಳಿಸಿದ್ದಾರೆ. ಅವರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ತಾವೇ ಅಪ್‌ಲೋಡ್‌ ಮಾಡಬಹುದು
ಸಮೀಕ್ಷೆ ಕಾರ್ಯವನ್ನು ನಾಗರಿಕರು ತಾವೇ ನೇರವಾಗಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಏರ್ಪಡಿಸುವ ಶಿಬಿರದಲ್ಲಿ ಭಾಗವಹಿಸುವ ಮೂಲಕ https://kscbcselfdeclaration.karnataka.gov.in/ ಲಾಗಿನ್ ಆಗಿ ಸಮೀಕ್ಷಾ ಕಾರ್ಯದಲ್ಲಿ ದಾಖಲು ಮಾಡಿಕೊಳ್ಳಬಹುದಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.









































































































error: Content is protected !!
Scroll to Top