ಹಾಪ್ ಕಾಮ್ಸ್ ನಿರ್ದೇಶಕರಾಗಿ ಹರೀಶ್‌ ಕಲ್ಯಾ, ನಿರ್ಮಲಾ ಮೀಯ್ಯಾರು ಅವಿರೋಧ ಆಯ್ಕೆ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ (ಹಾಪ್ ಕಾಮ್ಸ್)ನ ಆಡಳಿತ ಮಂಡಳಿಯ 16 ನಿರ್ದೇಶಕರ ಆಯ್ಕೆಯು ಅವಿರೋಧವಾಗಿ ನಡೆಯಿತು. ಅ. 5ರಂದು ಚುನಾವಣೆ ನಿಗದಿಯಾಗಿತ್ತಾದರೂ ಎಲ್ಲಾ ನಿರ್ದೇಶಕರ ಆಯ್ಕೆಯು ಅವಿರೋಧವಾಗಿ ನಡೆಯಿತು.
ಕಾರ್ಕಳ ಕ್ಷೇತ್ರದಿಂದ ಪ್ರಗತಿಪರ ಕೃಷಿಕ ಹರೀಶ್‌ ಕಲ್ಯಾ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ತಾ. ಪಂ. ಮಾಜಿ ಅಧ್ಯಕ್ಷೆ ನಿರ್ಮಲಾ ಮಿಯ್ಯಾರು (ಗ್ರಾ. ಪಂ. ಮಾಜಿ ಅಧ್ಯಕ್ಷರಾಗಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಮುಖ್ ಆಗಿ ಕಾರ್ಯನಿರ್ವಹಿಸಿದ್ದರು), ಮಂಗಳೂರು ಕ್ಷೇತ್ರದಿಂದ ಪ್ರಶಾಂತ್ ಎ. ಗಟ್ಟಿ ಬೋಳಿಯಾರು, ಪುತ್ತೂರು ಕ್ಷೇತ್ರದಿಂದ ಪುಣ್ಚಪ್ಪಾಡಿ ಗ್ರಾಮದ ಸಚಿನ್ ಕುಮಾರ್ ಜೈನ್, ಬಂಟ್ವಾಳ ಕ್ಷೇತ್ರದಿಂದ ಯಶೋಧರ ಶೆಟ್ಟಿ ದಂಡೆ ವಾಮನಪದವು, ಸುಳ್ಯ ಕ್ಷೇತ್ರದಿಂದ ಜಯಪ್ರಕಾಶ ಕೂಜುಗೋಡು, ಬೆಳ್ತಂಗಡಿ ಕ್ಷೇತ್ರದಿಂದ ರತ್ನರಾಜ್ ಬಳೆಂಜ, ಉಡುಪಿ ಕ್ಷೇತ್ರದಿಂದ ಜಯಕುಮಾರ್ ಪರ್ಕಳ, ಕುಂದಾಪುರ ಕ್ಷೇತ್ರದಿಂದ ಅನಂತ ಪದ್ಮನಾಭ ಕುಂದಬಾರಂದಾಡಿ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸೀತಾರಾಮ ಗಾಣಿಗ ಹಾಲಾಡಿ, ಹಿಂದುಳಿದ ವರ್ಗ ಬಿ ಯಿಂದ ವಿಜಯ ರೈ ಅಜ್ಜಿಬೆಟ್ಟು ಬಂಟ್ವಾಳ, ಪರಿಶಿಷ್ಟ ಜಾತಿ ಸ್ಥಾನದಿಂದ ಚೀಂಪ ಆರೂರು ಉಡುಪಿ, ಪರಿಶಿಷ್ಟ ಪಂಗಡ ಸ್ಥಾನದಿಂದ ಸುಂದರ ನಾಯ್ಕ ಇರ್ವತ್ತೂರು ಬಂಟ್ವಾಳ, ಮಹಿಳಾ ಮೀಸಲು ಸ್ಥಾನದಿಂದ ಮಮತಾ ಶೆಟ್ಟಿ ಗುರುವಾಯನಕೆರೆ, ಬಿ ತರಗತಿ ಸದಸ್ಯ ಸ್ಥಾನದಿಂದ ಸುಭದ್ರ ರಾವ್ ಪೆರ್ಮಂಕಿ ಮಂಗಳೂರು, ಲಕ್ಷ್ಮೀನಾರಾಯಣ ಉಡುಪ ನೈನಾಡು ಬಂಟ್ವಾಳ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.









































































































error: Content is protected !!
Scroll to Top