ಕಾಲು ಜಾರಿ ಬಿದ್ದು ಮಹಿಳೆ ಸಾವು

ಕಾರ್ಕಳ : ಕಾಲು ಜಾರಿ ಬಿದ್ದು ಮಹಿಳೆಯೋರ್ವರು ಮೃತಪಟ್ಟ ದುರ್ಘಟನೆ ಆ. 31ರಂದು ಸಾಣೂರಿನಲ್ಲಿ ಸಂಭವಿಸಿದೆ. ರಾಜೀವಿ (50) ಮೃತ ದುರ್ದೈವಿ. ಇವರು ಮನೆಯ ಹಿಂದುಗಡೆ ಇರುವ ಕೊಟ್ಟಿಗೆಯ ಬಳಿ ಸ್ನಾನ ಮಾಡಲೆಂದು ಹೋದಾಗ ಕಾಲು ಜಾರಿ ಬಿದ್ದು ತಲೆಗೆ ಕಲ್ಲು ತಾಗಿ ಪೆಟ್ಟಾಗಿರುತ್ತದೆ. ಗಾಯಗೊಂಡ ಅವರನ್ನು ಚಿಕಿತ್ಸೆಗೆ ಕರೆದೊಯ್ಯಲು 108 ಆಂಬುಲೆನ್ಸ್ ವಾಹನ ಬಂದಿದ್ದು, ಅದರಲಿದ್ದ ವೈದ್ಯರು ಪರೀಕ್ಷಿಸಿ ರಾಜೀವಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.









































error: Content is protected !!
Scroll to Top