ಕಾರ್ಕಳ : ಎಲೆಕ್ಟ್ರಿಕಲ್ ಉಪಕರಣಗಳ ಸರ್ವಿಸ್ ಅಂಗಡಿಯಿಂದ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ಜು. 15ರಂದು ಮಿಯ್ಯಾರು ಗ್ರಾಮದ ಜೋಡುಕಟ್ಟೆಯಲ್ಲಿ ನಡೆದಿದೆ. ಜು. 15ರ ರಾತ್ರಿ ಯಾರೋ ಕಳ್ಳರು ಜೋಡುಕಟ್ಟೆಯ ಕೊಂಕಣ್ ಕಾಂಪ್ಲೇಕ್ಸ್‌ನಲ್ಲಿರುವ ಅನ್ನಪೂರ್ಣ ಎಲೆಕ್ಟ್ರಿಕಲ್ ಉಪಕರಣಗಳ ಸರ್ವಿಸ್ ಅಂಗಡಿ ಕೋಣೆಯ ಶಟರ್‌ಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ರಿಪೇರಿಗೆ ಬಂದ ಸುಮಾರು 85,000 ರೂ. ಮೌಲ್ಯದ ಹಳೆಯ ನೀರಿನ ಪಂಪುಗಳು -14, ಸುಮಾರು 3,000 ರೂ. ಮೌಲ್ಯದ 6 ಹಳೆಯ ಪ್ಯಾನಿನ ಕೋರುಗಳು, ಸುಮಾರು 3,125 ರೂ. ಮೌಲ್ಯದ 2 ½ ಕೆ.ಜಿ ತೂಕದ ವಯರ್‌ಗಳು ಹಾಗೂ ಸುಮಾರು 8,000 ರೂ. ಮೌಲ್ಯದ 02 ಇಂಡಸ್ಟ್ರಿಯಲ್ ಪಂಪು ಸೇರಿದಂತೆ ಒಟ್ಟು 99,125 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಅಂಗಡಿ ಮಾಲಕ ರೋಹಿತ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಎಲೆಕ್ಟ್ರಿಕಲ್ ಉಪಕರಣಗಳ ಸರ್ವಿಸ್ ಅಂಗಡಿಯಿಂದ ಸಾವಿರಾರು ರೂ. ಮೌಲ್ಯದ ಸೊತ್ತುಗಳ ಕಳವು



















