ಮಣಿಪಾಲ-ಉಡುಪಿ ಜ್ಞಾನಸುಧಾ : ಕಾರ್ಗಿಲ್ ವಿಜಯ ದಿವಸ ಆಚರಣೆ

ದೇಶವನ್ನು ಭಾವನಾತ್ಮಕವಾಗಿ ಮರು ಒಗ್ಗೂಡಿಸಿದ ದಿನ : ಪ್ರಕಾಶ್ ಮಲ್ಪೆ

ಉಡುಪಿ : ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ನಾಗಬನ ಕ್ಯಾಂಪಸ್ ಹಾಗೂ ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರ ಈ ಉಭಯ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜು. 26ರಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಮಾತನಾಡಿ, ಈ ದಿನ ದೇಶವನ್ನು ಭಾವನಾತ್ಮಕವಾಗಿ ಮರು ಒಗ್ಗೂಡಿಸಿದ ದಿನ ಎಂದ ಅವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದೇಶಭಕ್ತಿಯನ್ನು ಹಾಗೂ ದೇಶ ಕಾಯುವ ಸೈನಿಕರನ್ನು ಗೌರವಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ನೌಕಾ ಸೇನೆಯ ನಿವೃತ್ತ ಪೆಟ್ಟಿ ಆಫೀಸರ್ ಕೆ. ಗಣೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜ್ಞಾನಸುಧಾ ಪ್ರಾಂಶುಪಾಲ ಸಂತೋಷ್, ಉಪಪ್ರಾಂಶುಪಾಲರಾ ಪ್ರಕಾಶ್ ಜೋಗಿ, ಮಣಿಪಾಲ್ ಜ್ಞಾನಸುಧಾ ಪ್ರಾಂಶುಪಾಲ ಗಣೇಶ ಶೆಟ್ಟಿ, ಉಪ ಪ್ರಾಂಶುಪಾಲ ಹೇಮಂತ, ರವಿ ಜಿ. ಉಪಸ್ಥಿತರಿದ್ದರು. ಮಣಿಪಾಲ್ ಜ್ಞಾನಸುಧಾ ಆಂಗ್ಲ ಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.



































































































error: Content is protected !!
Scroll to Top