ಆಪರೇಷನ್ ಸಿಂಧು ಕಾರ್ಯಾಚರಣೆಯಲ್ಲಿ ಸ್ಥಳಾಂತರಿಸಲಾದ ಭಾರತೀಯರ ಸಂಖ್ಯೆ 3,154
ದೆಹಲಿ : ಇರಾನ್‌ನಲ್ಲಿ ಸಿಲುಕಿದ್ದ 296 ಭಾರತೀಯರು ಮತ್ತು ನಾಲ್ವರು ನೇಪಾಳಿ ಪ್ರಜೆಗಳನ್ನು ಹೊತ್ತ ಮತ್ತೊಂದು ವಿಶೇಷ ವಿಮಾನ ಬುಧವಾರ ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಜೂ. 25 ರಂದು ಸಂಜೆ 4:30 ಕ್ಕೆ ಮಶಾದ್‌ನಿಂದ ಹೊರಟು ದೆಹಲಿಗೆ ಬಂದಿಳಿದ ವಿಶೇಷ ವಿಮಾನದಲ್ಲಿ 296 ಭಾರತೀಯರು ಮತ್ತು 4 ನೇಪಾಳಿ ಪ್ರಜೆಗಳನ್ನು ಇರಾನ್‌ನಿಂದ ಸ್ಥಳಾಂತರಿಸಲಾಯಿತು. ಆಪರೇಷನ್ ಸಿಂಧು ಕಾರ್ಯಾಚರಣೆಯಡಿ ಇಲ್ಲಿಯವರೆಗೆ 3154 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಮನೆಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ X ನಲ್ಲಿ ಪೋಸ್ಟ್ ಮಾಡಿದೆ.











