ಮಂಗಳೂರು : ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರದ ರನ್‌ವೇ ವಿಸ್ತರಣೆ ಬೇಡಿಕೆ

ಮಂಗಳೂರು : ಅಹಮದಾಬಾದ್‌ನಲ್ಲಿ ಸಂಭವಿಸಿದ ಮಹಾ ವಿಮಾನ ದುರಂತ ಎಲ್ಲರಿಗೂ ಗೊತ್ತಿದೆ. ಏರ್ ಇಂಡಿಯಾಕ್ಕೆ ಸೇರಿದ ವಿಮಾನ ಸರಿಯಾಗಿ ಹದಿನೈದು ವರ್ಷದ ಹಿಂದೆ ಮಂಗಳೂರಿನಲ್ಲಿ ಪತನಗೊಂಡಿತ್ತು. ವಿಮಾನ ರನ್​ವೇಯನ್ನು‌ ದಾಟಿ ಕಣಿವೆಗೆ ಜಾರಿ ಸಂಭವಿಸಿದ್ದ ದುರಂತಕ್ಕೆ ಮಂಗಳೂರು ವಿಮಾನ ನಿಲ್ದಾಣ ಕಡಿಮೆ ಉದ್ದದ ರನ್​ವೇ ಹೊಂದಿರುವುದು ಸಹ ಕಾರಣ ಎಂದು ಹೇಳಲಾಗಿತ್ತು. ಆದರೆ ಈ ಭೀಕರ ದುರಂತ ನಡೆದು 15 ವರ್ಷವಾದರೂ ರನ್​​ವೇ ವಿಸ್ತರಣೆ ಮಾಡಲಾಗಿಲ್ಲ.

2010 ಮೇ 22ರ ಮುಂಜಾನೆ, ಗಲ್ಫ್‌ನಿಂದ ಮಂಗಳೂರಿಗೆ ಹಾರಿಬಂದ ವಿಮಾನ ಲ್ಯಾಂಡಿಂಗ್‌ ವೇಳೆ ಬಜ್ಪೆಯ ಕಿರಿದಾದ ರನ್‌ ವೇಯಲ್ಲಿ ಜಾರಿ ಕಣಿವೆಗೆ ಬಿದ್ದು ಭಯಾನಕ ದುರಂತ ಸಂಭವಿಸಿತ್ತು. 158 ಪ್ರಯಾಣಿಕರು ಸಜೀವ ದಹನವಾಗಿದ್ದರು. ಅಂದಿನಿಂದ ಶುರುವಾದ ಮಂಗಳೂರು ವಿಮಾನ ನಿಲ್ದಾಣದ ರನ್‌ ವೇ ವಿಸ್ತರಣೆಯ ಕೂಗು ಇನ್ನೂ ಮೊಳಗುತ್ತಲೇ ಇದೆ. ಇದೀಗ ಅಹಮದಾಬಾದ್ ವಿಮಾನ ದುರಂತದ ಬಳಿಕ ಮತ್ತೆ ರನ್​​ವೇ ವಿಸ್ತರಣೆಯ‌ ಕೂಗು ಜೋರಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ರನ್​ವೇ ಪ್ರಸ್ತುತ 8,038 ಅಡಿ ಉದ್ದವಿದೆ. ದುರಂತ ನಡೆದ ಬಳಿಕ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ 280 ಎಕರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಭೂ ಸ್ವಾಧೀನಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ, ಅಧಿಕ ಮೊತ್ತ ಅಗತ್ಯವಿದ್ದ ಕಾರಣ ವಿಸ್ತರಣೆಯನ್ನು 10,500 ಅಡಿಗೆ ಇಳಿಸಲಾಯಿತು. ಅದೂ ಹೊರೆ ಎಂದುಕೊಂಡು ಸದ್ಯ 32.97 ಎಕರೆ ಭೂ ಸ್ವಾಧೀನಕ್ಕೆ ಮಿತಗೊಳಿಸಲಾಗಿದೆ. ಆದರೆ ಸ್ವಾಧೀನ ಪ್ರಕ್ರಿಯೆಗಳು ಇನ್ನು ನಡೆದಿಲ್ಲ.





























































































error: Content is protected !!
Scroll to Top