ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಹಟ್ಟಿಯಿಂದ ದನ‌ ಕಳವು ಪ್ರಕರಣ – ಓರ್ವ ಆರೋಪಿ ಬಂಧನ

ಕಾರ್ಕಳ : ಮುಡಾರು ಗ್ರಾಮದ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನ ಹಟ್ಟಿಯಿಂದ ಜೂ.16ರಂದು ಮೂರು ದನ ಕಳ್ಳತನಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಗಂಟಾಲ್ ಕಟ್ಟೆಯ ಸಲೀಂ(38) ಬಂಧಿತ ಆರೋಪಿ. ಈತನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಘಟನೆ
ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್‌ನ ಹಟ್ಟಿಯಿಂದ ಜೂ. 16ರಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆಗೆ 3 ದನಗಳ ಕಳವಾಗಿತ್ತು. ಕಳವಾದ ದನಗಳ ಅಂದಾಜು ಮೌಲ್ಯ 10,000 ರೂ. ಆಗಿರುತ್ತದೆ. ಈ ಬಗ್ಗೆ ಟ್ರಸ್ಟ್‌ನ ಸಂಚಾಲಕ ಎಂ. ಕೆ. ವಿರಂಜಯ್‌ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.































































































error: Content is protected !!
Scroll to Top