ಮುದ್ರಾಡಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಹೆಬ್ರಿ : ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆಸಕ್ತ ಮಕ್ಕಳಿಗೆ ಯೋಗ ತರಬೇತಿ ಆರಂಭಿಸುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಜೂ. 21 ರಂದು ಆಚರಿಸಲಾಯಿತು.

ನಿವೃತ್ತ ಶಿಕ್ಷಕ ಯೋಗ ಗುರು ಮುದ್ರಾಡಿ ಗಣಪತಿ ಪೈ ವಿಶ್ವ ಯೋಗ ದಿನಾಚರಣೆಯಂದು ಶಾಲಾ ಮಕ್ಕಳಿಗೆ ಉಚಿತ ಯೋಗ ಕ್ಲಾಸ್ ಪ್ರಾರಂಭಿಸಿದ್ದು, ಶಾಲೆಯಲ್ಲಿ ಸದಾ ನಡೆಯುವ ಯೋಗ ತರಬೇತಿಯಲ್ಲಿ ಮಕ್ಕಳು ತಪ್ಪದೆ ಭಾಗವಹಿಸಲು ಕರೆ ನೀಡಿದರು.

ಅವರು ಯೋಗದ ಬಗ್ಗೆ ಮಾಹಿತಿ ನೀಡುತ್ತಾ ಮನಸ್ಸು ಮತ್ತು ದೇಹದ ಸಮತೋಲನದ ಮೂಲಕ ಅರೋಗ್ಯಕರ ಜೀವನಕ್ಕೆ ಯೋಗ ಒಂದು ಸಾಧನ ಮಾನಸಿಕ ಮತ್ತು ದೈಹಿಕ ಶಕ್ತಿ ನೀಡುವ ಅರೋಗ್ಯದ ಮೂಲ ಮಂತ್ರ. ಶಾಲಾ ಮಕ್ಕಳು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು ಎಂದರು.

ಬಳಿಕ ನಡೆದ ಯೋಗ ತರಬೇತಿಯಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಭಂಡಾರಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಸುರೇಖಾ ಶೆಟ್ಟಿ, ಸದಸ್ಯರು, ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಹ ಶಿಕ್ಷಕ ಬೇಳಂಜೆ ಸತೀಶ್ ನಾಯ್ಕ್ ನಿರ್ವಹಿಸಿದರು.



































































































error: Content is protected !!
Scroll to Top