ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಉಭಯ ಜಿಲ್ಲೆಯ 399 ಗ್ರಾ.ಪಂ. ಗಳಲ್ಲಿ ಏಕಕಾಲಕ್ಕೆ ಧರಣಿ

ಉಡುಪಿ : ರಾಜ್ಯ ಸರಕಾರದ ಆಡಳಿತದ ವಿರುದ್ಧ ಗ್ರಾಮ ಗ್ರಾಮಗಳಲ್ಲಿ ಜನ ಆಕ್ರೋಶದಿಂದಿದ್ದಾರೆ. ಕಾಂಗ್ರೆಸ್‌ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ದ.ಕ. ಮತ್ತು ಉಡುಪಿ ಜಿಲ್ಲೆಯ 399 ಗ್ರಾ. ಪಂ. ಗಳಲ್ಲಿ ಏಕ ಕಾಲಕ್ಕೆ ಧರಣಿ ಸತ್ಯಾಗ್ರಹ ನಡೆದಿದೆ. ರಾಜ್ಯ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಂಡರೂ ಸಂಪೂರ್ಣವಾಗಿ ಜನಹಿತವನ್ನು ಮರೆತಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಅವರು ಜೂ. 23ರಂದು ಕುಕ್ಕುಂದೂರು ಗ್ರಾ. ಪಂ. ಮುಂಭಾಗದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ಕಾರ್ಕಳ ತಾಲೂಕಿನಲ್ಲಿ 3 ಸಾವಿರ ವೃದ್ದಾಪ್ಯ ವೇತನ ಹಾಗೂ 3,600 ಸಂಧ್ಯಾ ಸುರಕ್ಷಾ ಫಲಾನುಭವಿಗಳ ಹೆಸರು ರದ್ದುಪಡಿಸಲು ರಾಜ್ಯ ಸರಕಾರ ಮುಂದಾಗಿದೆ. ಯೋಜನೆಗಳ ಮೂಲಕ ಜನರ ಹಿತವನ್ನು ಕಾಪಾಡಬೇಕಾದ ಸರಕಾರ ಸಂಪೂರ್ಣವಾಗಿ ಜನವಿರೋಧಿ ನಿಲುವುಗಳನ್ನು ಅನುಸರಿಸುತ್ತಿದೆ. ಹಾಲು, ಟ್ಯಾಕ್ಸ್‌, ಮನೆ ತೆರಿಗೆ, ಸ್ಟ್ಯಾಂಪ್‌ ಡ್ಯೂಟಿ, ವಿದ್ಯುತ್‌, ಅಬಕಾರಿ ಸುಂಕ, ಪೆಟ್ರೋಲ್‌, ಡಿಸೇಲ್‌, ಕಂದಾಯ ಪತ್ರಗಳ ಬೆಲೆ ಏರಿಕೆ ಮಾಡಿದರೂ ತೃಪ್ತಿಗೊಳ್ಳದ ಸರಕಾರ 60 ವರ್ಷ ಮೇಲ್ಪಟ್ಟವರ ವೃದ್ಧಾಪ್ಯ ವೇತನಕ್ಕೂ ಕೈ ಹಾಕಿದೆ ಎಂದು ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಮನೆ ಕಟ್ಟದ ಪರಿಸ್ಥಿತಿ
ಕಾಂಗ್ರೆಸ್‌ ಸರಕಾರ 2 ವರ್ಷಗಳಲ್ಲಿ ಒಂದೇ ಒಂದು ಆಶ್ರಯ ಮನೆಯನ್ನು ನೀಡಿಲ್ಲ. ಆಶ್ರಯ ಮನೆ ಪಡೆಯಬೇಕಾದರೆ ದುಡ್ಡುಕೊಟ್ಟು ಕೊಂಡು ಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಕಾಂಗ್ರೆಸ್‌ ಶಾಸಕರೇ ಆರೋಪಿಸುತ್ತಿದ್ದಾರೆ ಎಂದು ಸುನಿಲ್‌ ಕುಮಾರ್‌ ಲೇವಡಿ ಮಾಡಿದರು.

ಕಾಪು ಪ್ರಾಧಿಕಾರಕ್ಕೆ ಅವಲಂಬನೆ
ಬಿಜೆಪಿ ಕಾಲದಲ್ಲಿ ಗ್ರಾ. ಪಂ.ಗೆ ನೀಡಿದ್ದು 9-11ನ ಅಧಿಕಾರವನ್ನು ಈಗ ಕಾಂಗ್ರೆಸ್‌ ಸರಕಾರ ಪ್ರಾಧಿಕಾರಕ್ಕೆ ನೀಡಿದೆ. ಇದರಿಂದಾಗಿ ಕಾರ್ಕಳ ತಾಲೂಕಿನ ಯಾವುದೇ ಗ್ರಾ.ಪಂ.ನ ವ್ಯಾಪ್ತಿಯಲ್ಲಿ ಒಬ್ಬ ಮನೆ ಕಟ್ಟಬೇಕಾದರೆ 9-11 ಸಮಸ್ಯೆ ಪರಿಹರಿಸಲು ಕಾಪು ಪ್ರಾಧಿಕಾರಕ್ಕೆ ಹೋಗಬೇಕಾಗಿದೆ. ಪರಿಣಾಮವಾಗಿ ಯಾರೂ ಮನೆ ಕಟ್ಟದ ಪರಿಸ್ಥಿತಿ ಎದುರಾಗಿದೆ ಎಂದ ಸುನಿಲ್‌ ಕುಮಾರ್‌ ಕೆಂಪು ಕಲ್ಲು, ಮರಳು ಸಿಗದೇ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಇಷ್ಟೆಲ್ಲಾ ಅವಾಂತರಗಳಾಗಿದ್ದರೂ ಸರಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

60% ಸರಕಾರ
ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ಅಬಕಾರಿ ಹಗರಣ, ಆಶ್ರಯ ಮನೆ ಹಗರಣ ಸೇರಿದಂತೆ ಬೇರೆ ಬೇರೆ ಹಗರಣ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಯಾಕೆಂದರೆ ಅವರೇ 60% ಕಮೀಷನ್‌ಗೆ ಬಲಿಯಾಗಿದ್ದಾರೆ. ಸರಕಾರವೇ 60% ಸರಕಾರ ಅನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇದನ್ನು ವಿರೋಧಿಸಿ ಇಂದು ಗ್ರಾ.ಪಂ. ಗಳಲ್ಲಿ ಆರಂಭಗೊಂಡ ಹೋರಾಟವನ್ನು ನಮ್ಮ ಬೇಡಿಕೆ ಈಡೇರಿಸುವವರೆಗೆ ಮುಂದುವರಿಸೋಣ ಎಂದರು.

ಧರಣಿ ಸತ್ಯಾಗ್ರಹದ ಪ್ರಮುಖ ವಿಷಯಗಳು
9/11 ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ
ಅಕ್ರಮ – ಸಕ್ರಮ ಅರ್ಜಿಗಳನ್ನು ತಿರಸ್ಕರಿಸುವುದನ್ನು ವಿರೋಧಿಸಿ
ಆಶ್ರಯ ಮನೆಗಳ ಬಿಡುಗಡೆಗೆ ಒತ್ತಾಯಿಸಿ
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ರದ್ಧತಿ ಆಕ್ಷೇಪಿಸಿ
ಕರಾವಳಿ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು, ಕಲ್ಲು ಹಾಗೂ ಕೆಂಪು ಕಲ್ಲಿಗೆ ನಿರ್ಬಂಧವನ್ನು ವಿರೋಧಿಸಿ
ವಿದ್ಯುತ್‌ ಬೆಲೆ ಏರಿಕೆಯನ್ನು ವಿರೋಧಿಸಿ

ಕಡ್ತಲ

ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಡ್ತಲ ಗ್ರಾ. ಪಂ. ಮುಂಭಾಗದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಂಚಾಯತ್‌ ಅಧ್ಯಕ್ಷ ಸುಕೇಶ್‌ ಹೆಗ್ಡೆ, ಮಾಜಿ ಅಧ್ಯಕ್ಷ ಸತೀಶ್‌ ಪೂಜಾರಿ ಎಳ್ಳಾರೆ, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ, ಉದ್ಯಮಿ ಪ್ರಸನ್ನ ಅತ್ರಿ ಮುಂಡಾರು, ಸಂಜೀವ ಪೂಜಾರಿ ಕಡ್ತಲ ಕಂಠಿಬೆಟ್ಟು, ಅರುಣ್‌ ಕುಮಾರ್‌ ಹೆಗ್ಡೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮರ್ಣೆ

ಗ್ರಾಮ ಸಮಿತಿ ಅಧ್ಯಕ್ಷ ಜಗದೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮರ್ಣೆ ಪಂಚಾಯತ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾ. ಪಂ. ಅಧ್ಯಕ್ಷೆ ಪ್ರಭಾವತಿ ನಾಯಕ್‌, ಪಕ್ಷದ ಪ್ರಮುಖರಾದ ಹರೀಶ್‌ ನಾಯಕ್‌, ಪ್ರಶಾಂತ್‌ ಶೆಟ್ಟಿ, ನಂದಕುಮಾರ್‌ ಹೆಗ್ಡೆ, ಗುರುಪ್ರಸಾದ್‌ ರಾವ್, ವಿದ್ಯಾ ಪೈ, ಜ್ಯೋತಿ ಪೂಜಾರಿ, ರತ್ನಾಕರ ಅಮೀನ್‌, ರಾಘವೇಂದ್ರ ಆಚಾರ್ಯ, ಸುಕೇಶ್‌ ಶೆಟ್ಟಿ, ನಿತ್ಯಾನಂದ ಸುವರ್ಣ, ಯುವಮೋರ್ಚಾದ ಅಕ್ಷಯ್‌ ಪ್ರಭು, ಪ್ರತೀಕ್‌ ಶೆಟ್ಟಿ ಭಾಗಿಯಾಗಿದ್ದರು.

ಹಿರ್ಗಾನ

ಗ್ರಾಮ ಸಮಿತಿಯ ಸುರೇಶ್ ಕುಲಾಲ್ ಅಧ್ಯಕ್ಷತೆಯಲ್ಲಿ ಹಿರ್ಗಾನ ಗ್ರಾಮ ಪಂಚಾಯತ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಾಯತ್‌ ಅಧ್ಯಕ್ಷೆ ಸುನೀತಾ ಪೂಜಾರಿ, ಉಪಾಧ್ಯಕ್ಷ ಮಹಾವೀರ ಕಟ್ಟಡ, ಮಾಜಿ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಮಾಜಿ ಉಪಾಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಸದಸ್ಯರಾದ ಮೈನಾಕರ ಶೆಟ್ಟಿ, ಸಂಜೀವ ಪೂಜಾರಿ, ಸರ್ವೋತ್ತಮ ಕಡಂಬ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು ಭಾಗಿಯಾಗಿದ್ದರು.

ಶಿರ್ಲಾಲು

ಗ್ರಾಮ ಸಮಿತಿಯ ಅಧ್ಯಕ್ಷ ಚಂದ್ರಕಾಂತ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶಿರ್ಲಾಲು ಗ್ರಾಮ ಪಂಚಾಯತ್‌ನಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಂಚಾಯತ್‌ ಅಧ್ಯಕ್ಷೆ ಭಾರತಿ ದೇವಾಡಿಗ, ಮಾಜಿ ಅಧ್ಯಕ್ಷ ರಮಾನಂದ ಪೂಜಾರಿ, ಪಕ್ಷದ ಮುಖಂಡರಾದ ಶಾಂತಿರಾಜ್‌ ಜೈನ್‌, ಮನೋಜ್‌ ಮುಂಡ್ಲಿ, ದಿವಾಕರ್‌, ಅಭಿನಂದನ್‌, ಅಜಿತ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕೆರ್ವಾಶೆ

ಗ್ರಾಮ ಸಮಿತಿ ಅಧ್ಯಕ್ಷ ವಿನೋದ್‌ ಅವರ ಅಧ್ಯಕ್ಷತೆಯಲ್ಲಿ ಕೆರ್ವಾಶೆ ಗ್ರಾಮ ಪಂಚಾಯತ್‌ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಪಂಚಾಯತ್‌ ಅಧ್ಯಕ್ಷೆ ಸುನಿತಾ ಅಮೀನ್‌, ಉಪಾಧ್ಯಕ್ಷ ಸುನಿಲ್‌ ಶೆಟ್ಟಿ, ಸದಸ್ಯರಾದ ಧರ್ಮರಾಜ ಹೆಗ್ಡೆ, ಸುಚೇತಾ, ಜಯಂತಿ, ಪುಷ್ಪಾ, ಮಾಜಿ ಸದಸ್ಯ ರಾಮಣ್ಣ ಸೇರ್ವೆಗಾರ್‌, ಹಿರಿಯರಾದ ಸುಬ್ರಾಯ ಭಟ್‌ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.

ಮಾಳ

ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ್‌ ಡೋಂಗ್ರೆ ಅಧ್ಯಕ್ಷತೆಯಲ್ಲಿ ಮಾಳ ಗ್ರಾಮ ಪಂಚಾಯತ್‌ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಂಚಾಯತ್‌ ಅಧ್ಯಕ್ಷ ಉಮೇಶ್‌ ಪೂಜಾರಿ, ಉಪಾಧ್ಯಕ್ಷೆ ವಿಮಲ ಪೂಜಾರ್ತಿ, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಶ್ರೀರಂಗ ಜೋಶಿ, ಗ್ರಾಮ ಸಮಿತಿ ಕಾರ್ಯದರ್ಶಿಗಳಾದ ರಾಜೇಶ್‌ ನಾಯ್ಕ್‌ ಮತ್ತು ಪ್ರವೀಣ್‌ ಹೆಗ್ಡೆ, ಪಂಚಾಯತ್‌ ಸದಸ್ಯರು ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.

ಮುಡಾರು
ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್‌ ಸಾಲಿಯಾನ್ ನೇತೃತ್ವದಲ್ಲಿ ಮುಡಾರು ಪಂಚಾಯತ್‌ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಪಂಚಾಯತ್‌ ಅಧ್ಯಕ್ಷೆ ಶೃತಿ ಡಿ. ಅತಿಕಾರಿ, ಕಾರ್ಕಳ ತಾಲೂಕು ಮಹಿಳಾ ಮೊರ್ಚಾ ಅಧ್ಯಕ್ಷೆ ವಿನಯ ಡಿ. ಬಂಗೇರ, ತಾಲೂಕು ಯವಮೋರ್ಚಾ ಪ್ರಧಾನ ಕಾರ್ಯದರ್ಶಿ ರಜತ್‌ ರಾಮ್ ಮೋಹನ್‌ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಗೀತಾ ಪಾಟ್ಕರ್‌, ಮಾಲತಿ ನಾಯಕ್‌, ಎಪಿಎಂಸಿ ಮಾಜಿ ಅಧ್ಯಕ್ಷೆ ತೋಮರಾ ಮೇರಾ, ಪಕ್ಷದ ಮುಖಂಡರಾದ ರಾಜು ಮೊಯ್ಲಿ, ಯಶವಂತ ಆಚಾರ್ಯ, ಪಂಚಾಯತ್‌ ಸದ್ಯಸ್ಯರು, ಕಾರ್ಮಿಕರು, ಗ್ರಾಮಸ್ಥರು ಭಾಗಿಯಾಗಿದ್ದರು.

ಕುಕ್ಕುಂದೂರು

ಗ್ರಾಮ ಸಮಿತಿ ಅದ್ಯಕ್ಷ ರವಿ ಶೆಟ್ಟಿ ಕೂಡೇಲು ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್‌ ಕಾಮತ್‌, ರವೀಂದ್ರ ಕುಮಾರ್‌ ಕುಕ್ಕುಂದೂರು, ಪಂಚಾಯತ್‌ ಸದಸ್ಯರಾದ ಅಂತೋನಿ ಡಿಸೋಜಾ, ಯೋಗೀಶ್‌ ಸಾಲಿಯಾನ್‌, ಪಕ್ಷದ ಪ್ರಮುಖರಾದ ಪ್ರಸಾದ್‌ ಐಸಿರ ಅನೇಕರು ಭಾಗವಹಿಸಿದ್ದರು.

ಬೈಲೂರು
ಗ್ರಾಮ ಸಮಿತಿ ಅಧ್ಯಕ್ಷ ಸಾಯಿರಾಮ್‌ ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ ಬೈಲೂರು ಪಂಚಾಯತ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಾಯತ್‌ ಅಧ್ಯಕ್ಷ ಸುಜಾತ ಪೂಜಾರಿ, ಉಪಾಧ್ಯಕ್ಷ ಸಂತೋಷ್‌ ಸಾಲಿಯಾನ್‌, ಜಿ. ಪಂ. ಮಾಜಿ ಸದಸ್ಯ ಸುಮಿತ್‌ ಶೆಟಿ ಕೌಡೂರು, ಪಂಚಾಯತ್‌ ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ಜಗದೀಶ್‌ ತೆಂಡುಲ್ಕೂರ್‌, ಸುರೇಶ್‌ ಸಾಲಿಯಾನ್‌, ಶ್ವೇತಾ ಶೆಟ್ಟಿ, ಜಗದೀಶ್‌ ಪೂಜಾರಿ, ಪಂಚಾಯತ್‌ ಸದಸ್ಯರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

ಯರ್ಲಪಾಡಿ

ಗ್ರಾಮ ಸಮಿತಿ ಅಧ್ಯಕ್ಷ ಸುನಿಲ್‌ ಹೆಗ್ಡೆ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಂಚಾಯತ್‌ ಉಪಾಧ್ಯಕ್ಷೆ ರೇಖಾ ಆಚಾರ್ಯ, ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಾಫ, ಬೈಲೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಉದಯ್‌ ಕುಮಾರ್‌ ಹೆಗ್ಡೆ, ನೀರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿವೇಕಾನಂದ ಶೆಟ್ಟಿ, ಯರ್ಲಪಾಡಿ ಯುವ ಮೋರ್ಚಾ ಅಧ್ಯಕ್ಷ ರಾಜೇಶ್‌ ಸಫಲಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೀರೆ
ಗ್ರಾಮ ಸಮಿತಿ ಅಧ್ಯಕ್ಷ ನೀರೆ ರವೀಂದ್ರ ನಾಯಕ್‌ ಅವರ ಅಧಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಾಯತ್‌ ಅಧ್ಯಕ್ಷ ಸಚ್ಚಿದನಾಂದ ಪ್ರಭು, ಪಂಚಾಯತ್‌ ಸದಸ್ಯರು, ಗ್ರಾಮ ಸಮಿತಿ, ಬೂತ್‌ ಸಮಿತಿ ಸದಸ್ಯರು ಸೇರಿದಂತೆ 300ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಕಲ್ಯಾ

ಗ್ರಾಮ ಸಮಿತಿ ಅಧ್ಯಕ್ಷ ರವಿರಾಜ್‌ ಉಪಾಧ್ಯಯ ಅಧ್ಯಕ್ಷತೆಯಲ್ಲಿ ಕಲ್ಯಾ ಪಂಚಾಯತ್‌ ಮುಂಭಾಗ ನಡೆದ ಪ್ರತಿಭಟನೆಯಲ್ಲಿ, ಪಂಚಾಯತ್‌ ಅಧ್ಯಕ್ಷೆ ಪೂಜಾ, ಉಪಾಧ್ಯಕ್ಷ ಹರಿಜೀವನ್‌, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುಪ್ರಿಯಾ ಶೆಟ್ಟಿ, ತಾಲೂಕು ಪಂಚಾಯತ್‌ ಸದಸ್ಯೆ ವಿದ್ಯಾ ಎಂ. ಸಾಲಿಯಾನ್‌, ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷೆ ರಶ್ಮಿ ಶೆಟ್ಟಿ, ಗ್ರಾ, ಪಂ ಮಾ. ಅಧಕ್ಷರಾದ ಸಂಜೀವ ಶೆಟ್ಟಿ, ನಾಗವೇಣಿ, ಮಾಜಿ ಸದಸ್ಯರಾದ ಕೃಷ್ಣ ರಾಜ ರೈ, ಮಾಜಿ ಉಪಾಧ್ಯಕ್ಷ ಲಕ್ಮೀ ಕಾಂತ ಭಟ್‌, ಹಾಲಿ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಶಿವಪುರ

ಗ್ರಾಮ ಸಮತಿ ಅಧ್ಯಕ್ಷ ಶಂಕರ ಬಡ್ಕಿಲಾಯ ಅವರ ಅಧ್ಯಕ್ಷತೆಯಲ್ಲಿ ಶಿವಪುರ ಗ್ರಾಮ ಪಂಚಾಯತ್‌ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್‌ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಪಂಚಾಯತ್‌ ಅಧ್ಯಕ್ಷೆ ಶೋಭಾ ಶೆಟ್ಟಿ, ಕಾರ್ಕಳ ಮಂಡಲ ಬಿಜೆಪಿ ಕಾರ್ಯದರ್ಶಿ ಸುರೇಶ್‌ ಶೆಟ್ಟಿ ಶಿವಪುರ, ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್‌ ಸೇರಿದಂತೆ ಪಂಚಾಯತ್‌ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ದುರ್ಗಾ

ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್‌ ರಾವ್‌ ಅಧ್ಯಕ್ಷತೆಯಲ್ಲಿ ದುರ್ಗಾ ಗ್ರಾಮ ಪಂಚಾಯತ್‌ ಮುಂಭಾಗ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಂಚಾಯತ್‌ ಅಧ್ಯಕ್ಷೆ ದೇವಕಿ, ಗ್ರಾಮ ಉಸ್ತುವಾರಿ ಅನಂತಕೃಷ್ಣ ಶೆಣೈ, ಗ್ರಾಮ ಸಮಿತಿ ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪಡ್ರೆ, ಪಂಚಾಯತ್‌ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಬೆಳ್ಮಣ್

ಉಭಯ ಜಿಲ್ಲೆಯ 399 ಗ್ರಾ. ಪಂ. ಗಳಲ್ಲಿ ಸರಿಸುಮಾರು 50 ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಈ ವಿನೂತನ ಪ್ರತಿಭಟನೆ ಆಡಳಿತ ಪಕ್ಷದ ಗಮನ ಸೆಳೆದಿದೆ.

ದುರ್ಗಾ

ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್‌ ರಾವ್‌ ಅಧ್ಯಕ್ಷತೆಯಲ್ಲಿ ದುರ್ಗಾ ಗ್ರಾಮ ಪಂಚಾಯತ್‌ ಮುಂಭಾಗ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಂಚಾಯತ್‌ ಅಧ್ಯಕ್ಷೆ ದೇವಕಿ, ಗ್ರಾಮ ಉಸ್ತುವಾರಿ ಅನಂತಕೃಷ್ಣ ಶೆಣೈ, ಗ್ರಾಮ ಸಮಿತಿ ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪಡ್ರೆ, ಪಂಚಾಯತ್‌ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.



































































































error: Content is protected !!
Scroll to Top