ಸ್ಕೂಟರ್‌ಗೆ ಬೈಕ್‌ ಡಿಕ್ಕಿ – ಸವಾರ ಸಾವು

ಕಾರ್ಕಳ : ದೂಪದಕಟ್ಟೆಯಲ್ಲಿ ಬೈಕ್‌ ಹಾಗೂ ಸ್ಕೂಟರ್‌ ಮಧ್ಯೆ ಅಪಘಾತ ಸಂಭವಿಸಿದ್ದು, ಪರಿಣಾಮ ಸ್ಕೂಟರ್‌ ಸವಾರ ಬೆರಂದೊಟ್ಟುವಿನ ರಮೇಶ್‌ ಆಚಾರ್ಯ (82) ಸಾವಿಗೀಡಾದ ಘಟನೆ ಮೇ 13ರಂದು ನಡೆದಿದೆ. ನಿಟ್ಟೆಯಿಂದ ಕಾರ್ಕಳ ಸಾಗುತ್ತಿದ್ದ ಬೈಕ್‌ ಹಾಗೂ ದೂದಪಕಟ್ಟೆಯಿಂದ ಬೆರಂದೊಟ್ಟುವಿಗೆ ಚಲಿಸುತ್ತಿದ್ದ ಸ್ಕೂಟರ್‌ ಮಧ್ಯೆ ಡಿಕ್ಕಿ ಸಂಭವಿಸಿದೆ. ಸ್ಕೂಟರ್‌ ಸವಾರ ರಮೇಶ್‌ ಆಚಾರ್ಯ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ವೇಳೆಗಾಗಲೇ ಮೃತಪಟ್ಟಿರುತ್ತಾರೆ. ಬೈಕ್‌ ಸವಾರ ನಿಟ್ಟೆ ಕಾಲೇಜಿನ ವಿದ್ಯಾರ್ಥಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.





























































































error: Content is protected !!
Scroll to Top